Advertisement

371 (ಜೆ) ಪ್ರಾಧ್ಯಾಪಕ ಹುದ್ದೆ ನೇಮಕಾತಿ ದೋಷ ಸರಿಪಡಿಸುವ ಆದೇಶ ಸ್ವಾಗತಾರ್ಹ

07:17 PM Feb 04, 2023 | Team Udayavani |

ಗಂಗಾವತಿ: 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಕುರಿತು ತಾತ್ಕಾಲಿಕ ಪಟ್ಟಿಯಲ್ಲಿ ಮಿಕ್ಕುಳಿದ ವೃಂದದ ಆಯ್ಕೆ ಸಂಬಂಧ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಆಗಿದ್ದ ಅನ್ಯಾಯವನ್ನು ಸರಿ ಪಡಿಸಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸುವ ಸರಕಾರದ ಆದೇಶವನ್ನು ಕಲಂ 371(ಜೆ) ಹೋರಾಟ ಸಮಿತಿ ಸ್ವಾಗತಿಸುತ್ತದೆ ಎಂದು ಸಂಚಾಲಕ ಧನರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಮೆರಿಟ್ ಇದ್ದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಕಲಂ 371(ಜೆ) ಅಡಿಯಲ್ಲಿ ಪರಿಗಣಿಸಿ ಕಲಂ 371(ಜೆ) ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳನ್ನು ಕೈ ಬಿಟ್ಟು ಆಯ್ಕೆ ತಾತ್ಕಲಿಕ ಪಟ್ಟಿಯನ್ನು ಪ್ರಕಟಿಸಿದ ಸರಕಾರದ ಕ್ರಮದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಆಯ್ಕೆಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೆರೀಟ್ ಹೊಂದಿದ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದದಲ್ಲಿ ಆಯ್ಕೆ ಮಾಡದೇ ಸ್ಥಳೀಯ ವೃಂದದಲ್ಲಿ ಆಯ್ಕೆ ಮಾಡುವ ಸಚಿವ ಸಂಪುಟದ ಉಪಸಮಿತಿಯ ನಿರ್ಣಯದಂತೆ ಪ್ರಾಧ್ಯಾಪಕರ ಆಯ್ಕೆಯ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸುವ ಆದೇಶ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದರು.

ಹೋರಾಟ ಸಮಿತಿ ಹಾಗೂ ಪತ್ರಿಕಾ ಮಾಧ್ಯಮಗಳು ನಿರಂತರ ವರದಿ ಮಾಡಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಸಚಿವರು ಶಾಸಕರು ಮತ್ತು ಸಂಸದರು, ಸಚಿವರು ಸಂಬಂಧಪಟ್ಟ ಅಧಿಕಾರಿಗಳು 371(ಜೆ) ಯ ಹಿತಾಸಕ್ತಿಗೆ ಪೂರಕವಾಗಿ ತಕ್ಷಣ ಸ್ಪಂದಿಸಿ ಉಂಟಾಗಿದ್ದ ಲೋಪಗಳನ್ನು ಸರಿಪಡಿಸುವ ನಿರ್ಣಯದೊಂದಿಗೆ ಫೆ. 01. ರಂದು ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ. ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ 150 ಅಭ್ಯರ್ಥಿಗಳು ಹೆಚ್ಚುವರಿಯಾಗಿ ಆಯ್ಕೆ ಪಟ್ಟಿಯಲ್ಲಿ ಸೇರಿಕೊಂಡು ಹುದ್ದೆ ಪಡೆಯುವಂತಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ನಿರಂತರ ಹೋರಾಟ ನಡೆಸಿ ಪರಿಷ್ಕೃತ ಆಯ್ಕೆ ಪಟ್ಟಿ ಆದೇಶ ಮಾಡಿಸಲು ಹೋರಾಟ ಸಮಿತಿ ಹಾಗೂ ಪತ್ರಿಕಾ ಮಾಧ್ಯಮದವರೊಂದಿಗೆ ನಿರಂತರ ಸಂಪರ್ಕ ಮಾಡಿದಂತೆ ಮುಂದಿನ ಪ್ರತಿಯೊಂದು ನೇಮಕಾತಿ, ಉನ್ನತ ಶಿಕ್ಷಣ ಪ್ರವೇಶದ ಸಂದರ್ಭದಲ್ಲೂ ಕಲ್ಯಾಣ ಕರ್ನಾಟಕದ ಭಾಗದ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿಗಳ ಜತೆಗಿರುವಂತೆ ಧನರಾಜ್ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next