Advertisement

Tigers report ;ದೇಶದಲ್ಲಿ ಹುಲಿಗಳ ಸಾ*ವಿನ ಸಂಖ್ಯೆಯಲ್ಲಿ ಶೇ.37 ಇಳಿಕೆ

01:37 AM Dec 10, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಈ ವರ್ಷ ಹುಲಿಗಳ ಸಾವಿನ ಸಂಖ್ಯೆ­ಯಲ್ಲಿ ಶೇ.37ರಷ್ಟು ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರದ ವಿಶ್ಲೇಷಣೆಯಿಂದ ತಿಳಿದುಬಂದಿದೆ. 2024ರಲ್ಲಿ 115 ಹುಲಿಗಳು ಮೃತಪಟ್ಟಿದ್ದು, 2023ರಲ್ಲಿ ಈ ಸಂಖ್ಯೆ 182 ಇತ್ತು. ಇದರಲ್ಲಿ ಸ್ವಾಭಾವಿಕ ಸಾವಿನ ಜತೆ ಸಂಘರ್ಷ, ಅಪಘಾತ, ವಿದ್ಯುತ್‌ ಸ್ಪರ್ಶ, ವಿಷಪ್ರಾಶನ ಇನ್ನಿತರ ಕಾರಣಗಳೂ ಸೇರಿವೆ. ಹುಲಿಗಳನ್ನು ಬೇಟೆಯಾಡಿ ಕೊಂದ ಪ್ರಕರಣಗಳಲ್ಲೂ ಕುಸಿತವಾಗಿದೆ. ಕಳೆದ ವರ್ಷ ಬೇಟೆಯಿಂ­ದಾಗಿ 17 ಹುಲಿಗಳು ಸತ್ತರೆ, ಈ ವರ್ಷ 4 ಹುಲಿಗಳು ಸತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next