Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 3500 ಕೋಟಿ ರೂ. ಅನುದಾನ

06:08 PM Sep 12, 2022 | Nagendra Trasi |

ಕಡೂರು: ವಿಧಾನಸಭಾ ಕ್ಷೇತ್ರಕ್ಕೆ ಕಳೆದ 4 ವರ್ಷಗಳಿಂದ ಸರ್ಕಾರದಿಂದ ಸುಮಾರು 3,500 ಕೋಟಿ ರೂ. ಅನುದಾನವನ್ನು ಹೋರಾಟ ಮಾಡಿ ತಂದಿದ್ದೇನೆ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಹಾಗೂ ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು.

Advertisement

ಬೀರೂರು ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಹಾಗೂ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 61 ನೇ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೀರೂರು ಶೈಕ್ಷಣಿಕ ವಲಯವನ್ನು ಮಲೆನಾಡು ಭಾಗದಿಂದ ಶಿಕ್ಷಣ ಇಲಾಖೆ ಹೊರಗಿಟ್ಟಿದ್ದರ ಪರಿಣಾಮ ಅನೇಕ ಶಿಕ್ಷಕರಿಗೆ ಇದು ತೊಡಕಾಗಿತ್ತು. ಇದನ್ನು ಸರಿಪಡಿಸುವಂತೆ ಶಿಕ್ಷಣ ಇಲಾಖೆ ಸಚಿವರು ಹಾಗೂ ಆಯುಕ್ತರಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಇಂದು ಮಲೆನಾಡು ಭಾಗ ಎಂದು ಇಲಾಖೆ ಘೋಷಿಸಿದ ಪರಿಣಾಮ ಇಂದು ಈ ಭಾಗದ ಶಿಕ್ಷಕರಿಗೆ ಬೇರೆಡೆ ನಿಯುಕ್ತಿಯಾಗದಂತೆ ಸಹಕಾರಿಯಾಗಿದೆ ಎಂದರು.

ಶಾಸಕರಾಗಿ ಏನು ಮಾಡಿದ್ದಾರೆ ಎಂದು ನಿಮ್ಮ ಕುಟುಂಬದವರು ಕೇಳಿದರೆ, ಆ ಪ್ರಶ್ನೆಗೆ ನೀವೇ ಉತ್ತರ ನೀಡಿ. 1281 ಕೋಟಿ ರೂ. ಗಳ ಭದ್ರಾ ಉಪಕಣಿವೆ ಯೋಜನೆಯಿಂದ ಕ್ಷೇತ್ರದ 119 ಕೆರೆಗಳು ತುಂಬುವುದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿ ರೈತರ ಬಾಳಿಗೆ ಬೆಳಕಾಗಲಿದೆ ಎಂಬ ಸಂದೇಶವನ್ನು ನೀಡಿ ಹಾಗೂ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಮಾತನಾಡಿ, ಹಲವು
ಹೋರಾಟದ ಫಲವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಅಕ್ಟೋಬರ್‌ ತಿಂಗಳಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗವನ್ನು ಘೋಷಣೆ ಮಾಡಿದ್ದು ಮುಂದಿನ ಜನವರಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂಬ ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಸಮಾಜದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಸೇವೆ ಶ್ಲಾಘನೀಯ. ಶಿಕ್ಷಕರು ಮಕ್ಕಳಿಗೆ ಜೀವನ ನಿರ್ವಹಿಸುವ ಶಿಕ್ಷಣವನ್ನು ನೀಡಬೇಕು. ಹಿಂದೆ ಗುರುಕುಲದ ಶಿಕ್ಷಣ ಅದ್ಭುತವಾಗಿತ್ತು. ಅದರಂತೆ ನಮ್ಮ ಕಾಲದ ಶಿಕ್ಷಣದಲ್ಲಿ ಗುರು ಹಿರಿಯರನ್ನು ಗೌರವಿಸುವ, ಸಮಾಜಕ್ಕೆ ಮಾದರಿಯಾಗಿದ್ದರು ಎಂದರು.

ಬೆಂಗಳೂರಿನ ಪ್ರಾಥಮಿಕ ಶಿಕ್ಷಣ ನಿರ್ದೇಶಕರಾದ ಪ್ರಸನ್ನಕುಮಾರ್‌, ಪ್ರೌಢಶಾಲಾ ಶಿಕ್ಷಕರ ಸಂಘದ ಬಿ. ಸಿದ್ದಬಸಪ್ಪ, ಉಪನಿರ್ದೇಶಕ ರಂಗಸ್ವಾಮಿ, ಬಿಇಒ ರಾಜಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಜೆ. ಜಗದೀಶ್‌ ಮಾತನಾಡಿದರು. ಕಡೂರು ಬಿಇಒ ಕೆ.ಎನ್‌. ಜಯಣ್ಣ, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ. ಸುದರ್ಶನ್‌, ಮಾರ್ಗದ ಮಧು, ಇಒ ದೇವರಾಜ ನಾಯ್ಕ, ಸಿಪಿಐ ಗುರುಪ್ರಸಾದ್‌, ಗೀತಾಜ್ಞಾನಮೂರ್ತಿ, ಸವಿತಾ
ರಮೇಶ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next