Advertisement

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

04:15 PM Oct 01, 2023 | Team Udayavani |

ಮುಂಬೈ: ಮಾರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ಪೌರಾಣಿಕ ಹುಲಿ ಉಗುರುಗಳ ಆಯುಧ (ವಾಘ್ ನಖ್)ನವೆಂಬರ್‌ನಲ್ಲಿ ಲಂಡನ್‌ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ.

Advertisement

1659 ರಲ್ಲಿ ಶಿವಾಜಿ ಮಹಾರಾಜರು ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ನನ್ನು ಸೋಲಿಸಲು ಬಳಸಿದ ‘ಹುಲಿ ಉಗುರುಗಳ ‘ ಆಯುಧವನ್ನು ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವದ ಸಂದರ್ಭದ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಮರಳಿ ತರಲಾಗುತ್ತಿದೆ.

ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಆಗಮಿಸಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

“ಮೊದಲ ಹಂತದಲ್ಲಿ, ನಾವು ವಾಘ್ ನಖ್ ಅನ್ನು ತರುತ್ತಿದ್ದೇವೆ. ಅದನ್ನು ನವೆಂಬರ್‌ನಲ್ಲಿ ಇಲ್ಲಿಗೆ ತರಬೇಕು ಮತ್ತು ಅದಕ್ಕಾಗಿ ನಾವು ಎಂಒಯುಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಕಿತ್ತೊಗೆದ ದಿನದಂದು ಅದನ್ನು ತರುವುದು ನಮ್ಮ ಪ್ರಯತ್ನ” ಎಂದು ಮುಂಗಂತಿವಾರ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

ವಾಘ್ ನಖ್ ಅನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ.

Advertisement

“ವಾಘ್ ನಖ್ ನಮಗೆ ಸ್ಫೂರ್ತಿ ಮತ್ತು ಶಕ್ತಿಯ ಮೂಲವಾಗಿದೆ. ಈ ವರ್ಷವು ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಸಹ ಸೂಚಿಸುತ್ತದೆ” ಎಂದು ಸಚಿವ ಮುಂಗಂತಿವಾರ್ ಹೇಳಿದ್ದಾರೆ.

‘ವಾಘ್ ನಖ್’ ನ ಸತ್ಯಾಸತ್ಯತೆ ಕುರಿತು ಮಹಾರಾಷ್ಟ್ರದಲ್ಲಿ ಚರ್ಚೆ ಆರಂಭವಾಗಿದೆ. ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ವೆಬ್‌ಸೈಟ್ ಛತ್ರಪತಿ ಶಿವಾಜಿ ಆಯುಧವನ್ನು ಬಳಸಿಲ್ಲ ಎಂದು ಹೇಳುತ್ತದೆ ಎಂದು ಇತಿಹಾಸ ತಜ್ಞ ಇಂದರ್‌ಜಿತ್ ಸಾವಂತ್ ಗಮನಸೆಳೆದಿದ್ದಾರೆ. ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೂಡ ‘ವಾಘ್ ನಖ್’ ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next