Advertisement

ನಿಷೇಧ ಆದೇಶ, ಕ್ವಾರೆಂಟೈನ್‌ ಉಲ್ಲಂಘನೆಯ 35 ಸಾವಿರ ಪ್ರಕರಣ ದಾಖಲು

12:51 PM Apr 13, 2020 | mahesh |

ಮುಂಬಯಿ: ಕಳೆದ ತಿಂಗಳಿನಿಂದ ವಿಧಿಸಲಾದ ಲಾಕ್‌ಡೌನ್‌ ಸಮಯದಲ್ಲಿ ನಿಷೇಧಿತ ಆದೇಶಗಳು ಮತ್ತು ಕ್ವಾರೆಂಟೈನ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಮಹಾರಾಷ್ಟ್ರ ಪೊಲೀಸರು ರಾಜ್ಯಾದ್ಯಂತ 35,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕೋವಿಡ್-19 ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಯತ್ನದಲ್ಲಿ ಪೊಲೀಸರು ಮಾ. 22ರಿಂದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಅಪರಾಧಿಗಳ ವಿರುದ್ಧ ಪ್ರಕರಣ ಗಳನ್ನು ದಾಖಲಿಸುವ ಮೂಲಕ ಕಠಿನ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿ ¨ªಾರೆ ಎಂದು ಅಧಿಕಾರಿ ನುಡಿದಿದ್ದಾರೆ.

ಈವರೆಗೆ ಐಪಿಸಿ ಸೆಕ್ಷನ್‌ 188 ರ ಅಡಿಯಲ್ಲಿ ರಾಜ್ಯಾದ್ಯಂತ ಕನಿಷ್ಠ 2,525 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ಪೊಲೀಸ್‌ ಸಿಬಂದಿ ಮೇಲೆ ಹಲ್ಲೆಯ 70 ಪ್ರಕರಣಗಳು ದಾಖಲಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ 161 ಜನರನ್ನು ಬಂಧಿಸಲಾಗಿದೆ ಎಂದರು. ಅಲ್ಲದೆ, ಸುಮಾರು 475 ಜನರು ಕ್ವಾರೆಂಟೈನ್‌ ಆದೇಶವನ್ನು ಉಲ್ಲಂ ಸಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಮತ್ತು ಅದಕ್ಕೆ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಪೊಲೀಸರು ತಮ್ಮ ವಿವಿಧ ನಿಯಂತ್ರಣ ಕೊಠಡಿಗಳಲ್ಲಿ ಈವರೆಗೆ 61,000 ಕ್ಕೂ ಹೆಚ್ಚು ಕರೆಗಳನ್ನು ನಿರ್ವಹಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಅಕ್ರಮ ಸಾರಿಗೆಗಾಗಿ ಪೊಲೀಸರು ಶನಿವಾರದವರೆಗೆ 803 ಪ್ರಕರಣಗಳನ್ನು ದಾಖಲಿಸಿಕೊಂಡು19,675 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಾಹನಗಳ ಮಾಲಕರಿಂದ 1.23 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಈವರೆಗೆ, ರಾಜ್ಯದಲ್ಲಿ ಮೂವರು ಪೊಲೀಸರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next