ಪಶ್ಚಿಮ ಬಂಗಾಳ: ಅಂಗನವಾಡಿಯಲ್ಲಿ ಊಟ ಸೇವಿಸಿದ 35 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ.
ಅಂಗನವಾಡಿ ಕೇಂದ್ರ ಎಂದೂ ಕರೆಯಲ್ಪಡುವ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಲ್ಲಿ ಮಧ್ಯಾಹ್ನದ ಊಟವನ್ನು ನೀಡಲಾಯಿತು. ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಮಕ್ಕಳಲ್ಲಿ ತಲೆನೋವು ಕಾಣಿಸಿಕೊಂಡಿದೆ ಅಲ್ಲದೆ ಕೆಲವು ಮಕ್ಕಳು ವಾಂತಿ ಮಾಡಿ ಅಸ್ವಸ್ಥಗೊಂಡಿದ್ದಾರೆ ಕೂಡಲೇ ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಅಡುಗೆ ಪಾತ್ರೆ ಪರಿಶೀಲಿಸಿದ ವೇಳೆ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ, ಘಟನೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ತಂಡ ಮಕ್ಕಳ ಅರೋಗ್ಯ ವಿಚಾರಿಸಿ ಪ್ರಕರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ :ಮುಖ್ಯಮಂತ್ರಿ ಬದಲಾವಣೆ: ಪ್ರವೀಣ್ ನೆಟ್ಟಾರು ಪತ್ನಿ ಕೆಲಸದಿಂದ ವಜಾ!