Advertisement

ಗುರು ರಾಯರ 346 ನೇ ಮಧ್ಯಾರಾಧನೆ:ಮಂತ್ರಾಲಯದಲ್ಲಿ ಭಕ್ತ ಸಾಗರ 

11:49 AM Aug 09, 2017 | |

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನೆ ಮಹೋತ್ಸವವನ್ನು ಬುಧವಾರ ಭಕ್ತಿ ಭಾವಗಳಿಂದ ಆಚರಿಸಲಾಗುತ್ತಿದ್ದು, ಶ್ರೀಮಠಕ್ಕೆ ಲಕ್ಷಾಂತರ ಭಕ್ತರು ಹರಿದು ಬಂದಿದ್ದಾರೆ. 

Advertisement

 ಶ್ರೀಗುರು ರಾಘವೇಂದ್ರರು ಸಶರೀರ ಬೃಂದಾವನಸ್ಥರಾಗಿ ಇಂದಿಗೆ 346 ವಸಂತಗಳು ತುಂಬಿರುವ ಗಳಿಗೆಯಲ್ಲಿ  ಪುರೋಹಿತರು ರಾಯರ ಮೂಲ ವೃಂದಾವನಕ್ಕೆ ವಿಶೇಷ ಅಭಿಷೇಕಗಳನ್ನು ಮಾಡಿದರು. ತುಪ್ಪ, ಕ್ಷೀರ, ಒಣ ಹಣ್ಣುಗಳು ಮತ್ತು ಪಂಚಾಮೃತ ಅಭಿಷೇಕ ಮಾಡಲಾಯಿತು. 

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆಗಳನ್ನು ನೆರವೇರಿಸಿದರು. ಸಂಪ್ರದಾಯದಂತೆ ತಿರುಪತಿ ತಿರುಮಲ ದೇಗುಲದಿಂದ ವಿಶೇಷ ವಸ್ತ್ರವನ್ನು ಸಮರ್ಪಿಸಲಾಗಿದೆ. 

ಮಠಕ್ಕೆ ಆಗಮಿಸಿರುವ ಅಸಂಖ್ಯ ಭಕ್ತರ ಅನುಕೂಲಕ್ಕಾಗಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ನೀರಿಲ್ಲದ ಕಾರಣ ಸ್ನಾನಕ್ಕೆ ನದಿ ಪಾತ್ರದಲ್ಲಿ ಶವರ್‌ಗಳನ್ನು ನಿರ್ಮಿಸಲಾಗಿದೆ. ಆರೋಗ್ಯ, ವಸತಿ, ಸಾರಿಗೆ ಸೌಲಭ್ಯಕ್ಕೆ ಕುಂದುಂಟಾಗದಂತೆ ಸಕಲ ಸೌಕರ್ಯ ಕಲ್ಪಿಸಲಾಗಿದೆ. 

Advertisement

ವಿವಿಧೆಡೆಗಳಿಂದ ಗಣ್ಯಾತೀಗಣ್ಯರು ಸೇರಿದಂತೆ 2 ಲಕ್ಷಕ್ಕೂ ಅಧಿಕ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದಾರೆ. ದೇಶದ ವಿವಿಧೆಡೆ ಏಕಕಾಲದಲ್ಲಿ ರಾಯರ ಆರಾಧನೆಯನ್ನು ವೈಭವದಿಂದ ನೆರವೇರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next