Advertisement

ರಾಜ್ಯದಲ್ಲಿ 34,432 ಕೋಟಿ ರೂ. ಬಂಡವಾಳ ಹೂಡಿಕೆ; 48,850 ಉದ್ಯೋಗ ಸೃಷ್ಟಿ

08:19 PM Aug 05, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 59ನೇ ಸಭೆಯಲ್ಲಿ ಒಟ್ಟು 34,432.46 ಕೋಟಿ ರೂ.ಗಳ ಒಟ್ಟು 18 ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು. ಇದರಿಂದ 48,850 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

Advertisement

ಟೊಯೊಟಾ ಮೋಟರ್ಸ್‌ ಸೇರಿದಂತೆ 8 ಹೊಸ ಕೈಗಾರಿಕಾ ಪ್ರಸ್ತಾವನೆಗಳು ಹಾಗೂ 10 ಹೆಚ್ಚುವರಿ ಹೂಡಿಕೆ ಯೋಜನೆಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ.

ಸಭೆಯಲ್ಲಿ18 ಪ್ರಮುಖ ಯೋಜನೆಗಳಿಗೆ ಒಪ್ಪಿಗೆ ನೀಡಿದ ನಂತರ ಶುಕ್ರವಾರ ಮಾತನಾಡಿದ ಬಸವರಾಜ ಬೊಮ್ಮಾಯಿ, “ಎಥೆನಾಲ್‌, ಏರೋಸ್ಪೇಸ್, ಸೆಮಿಕಂಡಕ್ಟರ್‌ ತಯಾರಿಕಾ ಯಂತ್ರಗಳು, ಸ್ಟೀಲ್‌ ಹಾಗೂ ಆಟೋ ಮೊಬೈಲ್‌ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಉದ್ಯಮಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ” ಎಂದರು.

ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ತೋಟಗಾರಿಕೆ ಸಚಿವ ಮುನಿರತ್ನ, ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್ ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅನುಮೋದನೆ ಪಡೆದ ಪ್ರಮುಖ ಯೋಜನೆಗಳು

Advertisement

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್- 3661.5 ಕೋಟಿ ರೂ.

ಟ್ರುಯಲ್ಟ್ ಬಯೋಎನರ್ಜಿ ಲಿಮಿಟೆಡ್, ಎಥೆನಾಲ್ ಘಟಕ -1856.47 ಕೋಟಿ ರೂ.

ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಸಂಸ್ಥೆ, ಸೆಮಿಕಂಡಕ್ಟರ್‌ ವಲಯದಲ್ಲಿ ( ಹೆಚ್ಚುವರಿ)- 1573 ಕೋಟಿ ರೂ.

ಸ್ಪೆಕ್ಟಾಕಲ್ ಲೆನ್ಸ್, ಸ್ಪೆಕ್ಟಾಕಲ್ ಬ್ಲಾಂಕ್ಸ್/ಸೆಮಿ ಫಿನಿಶ್ಡ್ ಲೆನ್ಸ್ ಮತ್ತು ಇಂಡಸ್ಟ್ರಿಯಲ್ ಕ್ವಾಲಿಟಿ ಸಲ್ಯೂಷನ್‌ ಮಷಿನ್‌, ವೈದ್ಯಕೀಯ ಸಲಕರಣೆಯನ್ನು ಉತ್ಪಾದಿಸುವ ಕಾರ್ಲ್ ಝೈಸ್ ಇಂಡಿಯಾ ಪ್ರೈ. ಲಿಮಿಟೆಡ್, (ಹೆಚ್ಚುವರಿ)- 977 ಕೋಟಿ ರೂ.

ಪ್ರಕಾಶ್ ಸ್ಪಾಂಜ್ ಐರನ್ ಎಂಡ್ ಪ್ರೈವೆಟ್ ಲಿಮಿಟೆಡ್, (ಹೆಚ್ಚುವರಿ)- 2500.09 ಕೋಟಿ ರೂ.

ಸೌರ ಕೋಶಗಳನ್ನು ಉತ್ಪಾದಿಸುವ ಎಂವಿ ಫೋಟೊವೋಲ್ಟಾಯಿಕ್ ಪವರ್ ಪ್ರೈವೇಟ್ ಲಿಮಿಟೆಡ್, (ಹೆಚ್ಚುವರಿ) – 232.15 ಕೋಟಿ ರೂ.

ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್, ಎಥೆನಾಲ್ ಘಟಕ- (ಹೆಚ್ಚುವರಿ)- ಕೋಟಿ ರೂ. 775.35 ಕೋಟಿ ರೂ.

ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಎಥೆನಾಲ್ ಘಟಕ- (ಹೆಚ್ಚುವರಿ)- 270.36 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next