Advertisement

34 ದಿನ, 1 ಕೋಟಿ ಲಸಿಕೆ!

12:54 AM Feb 20, 2021 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಲಸಿಕೆ ನೀಡಲಾರಂಭಿಸಿದ ದಿನದಿಂದ ಆರಂಭಿಸಿ ಕೇವಲ 34 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆಯನ್ನು ಬರೆ ದಿದೆ. ಅಮೆರಿಕದ ಅನಂತರ ಅತೀ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಿದ ವಿಶ್ವದ 2ನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಅಮೆರಿಕದಲ್ಲಿ 31 ದಿನಗಳಲ್ಲಿ 1 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಯು.ಕೆ.ಯಲ್ಲಿ 1 ಕೋಟಿ ಜನರಿಗೆ ಲಸಿಕೆ ನೀಡಲು 56 ದಿನಗಳನ್ನು ತೆಗೆದು ಕೊಳ್ಳಲಾಗಿದೆ. ಇದೀಗ, ಭಾರತ 34 ದಿನಗಳಲ್ಲೇ 1 ಕೋಟಿ ಜನರಿಗೆ ಲಸಿಕೆ ತಲುಪಿಸಿ ಹೊಸ ಸಾಧನೆ ಮಾಡಿದೆ ಎಂದು ಸಚಿವಾಲಯ ಹೇಳಿದೆ.

ಶುಕ್ರವಾರ ಬೆಳಗಿನವರೆಗಿನ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಲಸಿಕೆ ಪಡೆದ ಆರೋಗ್ಯ ಸಿಬಂದಿ (ಎಚ್‌ಸಿಡಬ್ಲ್ಯು) ಹಾಗೂ ಮುಂಚೂಣಿ ಯಲ್ಲಿರುವ ಕೋವಿಡ್ ವೀರರ (ಎಫ್ಎಲ್‌ಡಬ್ಲ್ಯು) ಸಂಖ್ಯೆ 1,01,88,007ರಷ್ಟಿದೆ. ಇವರಲ್ಲಿ ಮೊದಲ ಡೋಸ್‌ ಪಡೆದ ಎಚ್‌ಸಿಬಡ್ಬ್ಲ್ಯೂ ಸಿಬಂ ದಿಯ ಸಂಖ್ಯೆ 62,60,242ರಷ್ಟಿದ್ದರೆ, 2ನೇ ಡೋಸ್‌ ಪಡೆದ ಇದೇ ಸಿಬಂದಿಯ ಸಂಖ್ಯೆ 6,10, 899 ರಷ್ಟಿದೆ. ಇನ್ನು, ಮೊದಲ ಡೋಸ್‌ ಪಡೆದ ಎಚ್‌ಸಿಡಬ್ಲ್ಯು ಸಿಬಂದಿಯ ಸಂಖ್ಯೆ 33,16,866 ರಷ್ಟಿದೆ. ಒಟ್ಟು 2,11,462 ಸೆಷನ್‌ಗಳಲ್ಲಿ ಇಷ್ಟು ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

2ನೇ ಡೋಸ್‌ ಲಸಿಕೆ ನೀಡಿಕೆ ಶುರು: ಕೋವಿಡ್ ಲಸಿಕೆಯ ಮೊದಲ ಡೋಸ್‌ ಪಡೆದು 28 ದಿನ ಗಳನ್ನು ಪೂರೈಸಿರುವ ವ್ಯಕ್ತಿಗಳಿಗೆ ಲಸಿಕೆಯ 2ನೇ ಡೋಸ್‌ ನೀಡುವ ಪ್ರಕ್ರಿಯೆಯನ್ನು ಫೆ. 13ರಿಂದ ಆರಂಭಿಸಲಾಗಿದ್ದು, ಫೆ. 18ರ ವರೆಗೆ ಸುಮಾರು 6,58,674 ವ್ಯಕ್ತಿಗಳಿಗೆ 2ನೇ ಡೋಸ್‌ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದಿಂದ ಲಂಕಾಕ್ಕೆ 1 ಕೋಟಿ ಲಸಿಕೆ: ಇದೇ ಜನವರಿಯಲ್ಲಿ ಲಸಿಕೆ ನೀಡುವ ವಿಚಾರದಲ್ಲಿ ಭಾರತ ಕೈಗೊಂಡಿದ್ದ ನೆರೆಯ ರಾಷ್ಟ್ರಗಳಿಗೆ ಮೊದಲ ಆದ್ಯತೆ ಧ್ಯೇಯದಿಂದಾಗಿ, ಶ್ರೀಲಂಕಾ ಸುಮಾರು 5 ಲಕ್ಷ ಲಸಿಕೆಗಳನ್ನು ಉಚಿತವಾಗಿ ಭಾರತದಿಂದ ಪಡೆದು ಕೊಂಡಿತ್ತು. ಇದೀಗ ಭಾರತದಿಂದ ಮತ್ತಷ್ಟು ಲಸಿಕೆ ಗಳನ್ನು ಅದು ಮುಂದಾಗಿದೆ. ಅದರಂತೆ 1 ಕೋಟಿ ಲಸಿಕೆಗಳ ಡೋಸ್‌ಗಳನ್ನು ಕೊಳ್ಳಲು ಶ್ರೀಲಂಕಾ ಸರಕಾರ ಭಾರತದ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ(ಎಸ್‌ಐಐ)ಕ್ಕೆ ಮನವಿ ಮಾಡಿದ್ದು, ಈ ಕುರಿತಾದ ಒಪ್ಪಂದಕ್ಕೂ ಸಹಿ ಹಾಕಿದೆ.

Advertisement

ಮಹಾರಾಷ್ಟ್ರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ :

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ದಿಢೀರ್‌ ಏರಿಕೆಯಾದ ಹಿನ್ನೆಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಅಲ್ಲಿನ ಸ್ಥಳೀಯಾ ಡಳಿತಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊ ಳಿಸಿವೆ. ಕಳೆದ 75 ದಿನಗಳಲ್ಲಿ ಆ ರಾಜ್ಯದಾದ್ಯಂತ ಸುಮಾರು 5,000ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ನಾಗ್ಪುರದಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಮಹಾನಗರ ಪಾಲಿಕೆ, ಕೆಲವಾರು ನಿರ್ಬಂಧಗಳನ್ನು ಜಾರಿ ಮಾಡಿದೆ. ಅದರಂತೆ, ಹೊಟೇಲ್‌ಗ‌ಳಲ್ಲಿ ಶೇ. 50 ರಷ್ಟು ಗ್ರಾಹಕರು ಮಾತ್ರವೇ ಇರಬೇಕು. ಐದ  ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಇರುವ ಕಟ್ಟಡ ವನ್ನು ಸೀಲ್‌ ಮಾಡುವುದು ಇತ್ಯಾದಿ ನಿಯಮ ಗಳನ್ನು ಜಾರಿ ಮಾಡಿದೆ. ಹೋಮ್‌ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿ  ಗಳಿಗೆ ಕಡ್ಡಾಯವಾಗಿ ಅವರ ಮುಂಗೈ ಮೇಲೆ ಸೀಲ್‌ ಹಾಕುವುದು, ಅಂತ್ಯ ಸಂಸ್ಕಾರ ವೇಳೆಯಲ್ಲಿ 20ಕ್ಕಿಂತ ಹೆಚ್ಚು ವ್ಯಕ್ತಿಗಳು ಭಾಗಿಯಾಗಬಾರದು ಎಂದು ಹೇಳಿದೆ.

ಗುರುವಾರಷ್ಟೇ, ಮಹಾರಾಷ್ಟ್ರದ ಅಮರಾವತಿ  ಯಲ್ಲಿ ಎರಡು ದಿನಗಳ ವೀಕೆಂಡ್‌ ಲಾಕ್‌ಡೌನ್‌ ಘೋಷಿಸಲಾಗಿತ್ತು. ವಿದರ್ಭದಲ್ಲೂ ಈ ವರಾಂ  ತ್ಯದ ಎರಡು ದಿನ (ಶನಿವಾರ ರಾತ್ರಿ 8ರಿಂದ ರವಿವಾರ ಬೆಳಗ್ಗೆ 7ರ ವರೆಗೆ) ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಯವತ್ಮಾಲ್‌ ಜಿಲ್ಲೆ  ಯಲ್ಲಿ ಶುಕ್ರವಾರ 10 ದಿನಗಳ ಲಾಕ್‌ಡೌನ್‌ ಘೋಷಿಸಿದೆ.

ಎರಡು ಹೊಸ ತಳಿಗಳು ಪತ್ತೆ!: ಈ ನಡುವೆ, ಮಹಾರಾಷ್ಟ್ರದ ಅಮರಾವತಿಯಲ್ಲಿ ದಾಖಲಾಗಿ ರುವ ಕೊರೊನಾ ಸೋಂಕಿತರಲ್ಲಿ ಎರಡು ರೀತಿಯ ರೂಪಾಂತರ ಹೊಂದಿದ ಹೊಸ ಕೊರೊನಾ ವೈರಸ್‌ಗಳು ಪತ್ತೆಯಾಗಿವೆ. ಈ ವೈರಾ  ಣುಗಳು, ಪ್ರತಿಕಾಯಗಳಿಂದ ತಪ್ಪಿಸಿ  ಕೊಂಡು ಬೆಳೆಯಬಲ್ಲವಾಗಿವೆ ಎಂದು ಸಂಶೋ  ಧಕರು ತಿಳಿಸಿದ್ದಾರೆ. ಆದರೆ, ಇವು ಯು.ಕೆ., ದಕ್ಷಿಣ ಆಫ್ರಿಕಾ ಅಥವಾ ಬ್ರೆಜಿಲ್‌ ರಾಷ್ಟ್ರಗಳಲ್ಲಿ ಕಂಡು  ಬಂದ ವೈರಾಣು ರೂಪಾಂತರಗಳ ಮಾದ  ರಿ  ಯವುಗಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next