ಮುಜಾಫರ್‌ನಗರ: ಕಲಬೆರಕೆ ಹಾಲು ಮಾರಾಟ ಸಂಬಂಧ ದೂರು ದಾಖಲಾದ 32 ವರ್ಷಗಳ ನಂತರ ವ್ಯಕ್ತಿಯೊಬ್ಬರಿಗೆ ಉತ್ತರ ಪ್ರದೇಶದ ಮುಜಾಫರ್‌ನಗರ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾ. ಪ್ರಶಾಂತ್ ಕುಮಾರ್ ಅವರು, ಹಾಲು ಮಾರಾಟಗಾರ ಹರ್ಬಿರ್ ಸಿಂಗ್‌ಗೆ ಜೈಲು ಶಿಕ್ಷೆಯ ಜತೆಗೆ 5,000 ರೂ. ದಂಡ ವಿಧಿಸಿದ್ದಾರೆ.
ಹರ್ಬಿರ್ ಸಿಂಗ್ ಕಲಬೆರಕೆ ಹಾಲು ಮಾರಾಟ ಮಾಡುತ್ತಿರುವುದು ತಿಳಿದು, ಹಾಲಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಹಾಲು ಕಲಬೆರಕೆಯಾಗಿರುವುದು ತಿಳಿದುಬಂದಿದೆ.
ಈ ಸಂಬಂಧ 1990ರ ಏ.21ರಂದು ಹರ್ಬಿರ್ ಸಿಂಗ್ ವಿರುದ್ಧ ಫುಡ್ ಇನ್ಸ್‌ಪೆಕ್ಟರ್ ಸುರೇಶ್ ಚಾಂದ್ ದೂರು ದಾಖಲಿಸಿದ್ದರು.
Related Articles