Advertisement
ಅಮೃತ್ ಪೌಲ್- ಐಪಿಜಿ ಪೂರ್ವ ವಲಯ, ಕೆ.ವಿ.ಶರತ್‌ಚಂದ್ರ- ಕೇಂದ್ರ ವಲಯ ಐಜಿಪಿ , ವಿಪುಲ್ ಕುಮಾರ್- ದಕ್ಷಿಣ ವಲಯ ಐಜಿಪಿ (ಹೆಚ್ಚುವರಿ ಹೊಣೆಗಾರಿಕೆ), ಎಂ.ನಂಜುಂಡಸ್ವಾಮಿ- ಬಳ್ಳಾರಿ ಐಜಿಪಿ, ಎಚ್.ಎಸ್.ರೇವಣ್ಣ- ಬೆಂಗಳೂರು ಕೇಂದ್ರ ಕಾರಾಗೃಹ ಐಜಿಪಿ, ರಾಘವೇಂದ್ರ ಸುಹಾಸ್- ಉತ್ತರವಲಯ ಐಜಿಪಿ, ಡಾ.ಎ.ಸುಬ್ರಹ್ಮಣ್ಯೇಶ್ವರ- ಬೆಂಗಳೂರು ಗುಪ್ತದಳ ಡಿಐಜಿ, ಟಿ.ಆರ್.ಸುರೇಶ್- ಬೆಂಗಳೂರು ಜಂಟಿ ಆಯುಕ್ತರು, ಸಂದೀಪ್ ಪಾಟೀಲ್- ಮಂಗಳೂರು ಪೊಲೀಸ್ ಆಯುಕ್ತರು, ಡಾ.ಪಿ.ಎಸ್.ಹರ್ಷ-ಕೆಎಸ್ ಆರ್‌ಟಿಸಿ ಜಾಗೃತದಳದ ನಿರ್ದೇಶಕ, ವಿಕಾಸ್ ಕುಮಾರ್ ವಿಕಾಸ್- ನಕ್ಸಲ್ ನಿಗ್ರಹಪಡೆ ಡಿಐಜಿ. ಡಾ.ಚೇತನ್‌ಸಿಂಗ್ ರಾಥೋಡ್-ವಿಧಿ ವಿಜ್ಞಾನ ಪ್ರಯೋಗಾಲಯ ನಿರ್ದೇಶಕ, ಎನ್.ಶಶಿಕುಮಾರ್-ಬೆಂಗಳೂರು ಉತ್ತರ ಡಿಜಿಪಿ, ಡಾ.ಎಂ.ಬೋರಲಿಂಗಯ್ಯ-ಬೆಂಗಳೂರು ಗುಪ್ತದಳ ಎಸ್‌ಪಿ, ಅಭಿನವ್ ಖರೆ- ಗೃಹರಕ್ಷಕದಳ ಕಮಾಂಡೆಂಟ್, ಲಡಾ ಮಾರ್ಟಿನ್ ಮಾರ್ಬಿಯಾಂಗ್- ಕಲಬುರಗಿ ಎಸ್‌ಪಿ, ಕಾರ್ತಿಕ್ ರೆಡ್ಡಿ-ಡಿಐಜಿ(ಅಪರಾಧ), ಕೆ.ಸಂತೋಷ್ ಬಾಬು- ಚಿಕ್ಕಬಳ್ಳಾಪುರ ಎಸ್‌ಪಿ, ಇಶಾ ಪಂತ್- ಬೆಂಗಳೂರು ದಕ್ಷಿಣ ಡಿಸಿಪಿ, ಡಾ.ಧರ್ಮೇಂದ್ರ ಕುಮಾರ್ ಮೀನಾ- ಬೆಂಗಳೂರು ಅಪರಾಧ ತನಿಖಾ ವಿಭಾಗ ಎಸ್‌ಪಿ, ನಿಶಾ ಜೇಮ್ಸ್- ಉಡುಪಿ ಎಸ್ಪಿ, ಲಕ್ಷ್ಮಣ್ ಬಿಂಬರ್ಗಿ- ಬೆಂಗಳೂರು ವೈರ್‌ಲೆಸ್ ಎಸ್‌ಪಿ, ಸೋನವಾನೆ ಋಷಿಕೇಷ್ ಭಗವಾನ್-ಯಾದಗಿರಿ ಎಸ್ಪಿ, ಡಿ.ಎಲ್.ನಾಗೇಶ್- ಹುಬ್ಬಳ್ಳಿ-ಧಾರವಾಡ ಡಿಸಿಪಿ, ಡಾ.ಎಂ.ಅಶ್ವಿನಿ – ಶಿವಮೊಗ್ಗ ಎಸ್‌ಪಿ, ಎನ್.ವಿಷ್ಣುವರ್ಧನ್- ಡಿಸಿಪಿ (ಗುಪ್ತದಳ), ಎಚ್.ಡಿ.ಆನಂದ್‌ಕುಮಾರ್- ಚಾಮರಾಜ ನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ರಾಯಚೂರು: “ಆಪರೇಷನ್ ಆಡಿಯೋ’ ಪ್ರಕರಣದ ತನಿಖೆಗೆ ನಿಯೋಜನೆಗೊಂಡಿದ್ದ ಡಿವೈಎಸ್‌ಪಿ ಹರೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ತನಿಖೆ ನಿಮಿತ್ತ ಫೆ.19ರಂದು ದೇವದುರ್ಗ ಪ್ರವಾಸಿ ಮಂದಿರಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು. ದೂರುದಾರ ಶರಣಗೌಡ ಕಂದಕೂರ್ ಅವರನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆಯಲಾ ಗಿತ್ತು. ಆದರೆ, ಈಗ ವರ್ಗಾವಣೆ ಮಾಡಿದ್ದು, ಬೇರೆ ಯಾವುದೇ ಸ್ಥಳಕ್ಕೆ ಅವರನ್ನು ನಿಯೋಜನೆ ಮಾಡಿಲ್ಲ. ಅವರ ಸ್ಥಳಕ್ಕೆ ಬೆಂಗಳೂರಿನ ಸಿಐಡಿಯಲ್ಲಿದ್ದ ಬಸಪ್ಪ ಅಂಗಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ ನಿಮಿತ್ತ ಈ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದ್ದು, ತನಿಖೆ ಹೊಣೆ ಹೊತ್ತ ಅ ಧಿಕಾರಿ ವರ್ಗಾವಣೆ ಅಚ್ಚರಿ ಮೂಡಿಸಿದೆ.