Advertisement

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

01:26 AM May 18, 2024 | Team Udayavani |

ಮಂಗಳೂರು: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಮಂಗಳೂರು ಕ್ಯಾಂಪಸ್‌ನ 31ನೇ ಆವೃತ್ತಿಯ ಘಟಿಕೋತ್ಸವ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ ನಡೆಯಿತು.

Advertisement

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಉಪಕುಲಪತಿ ಡಾ| ಎಂ.ಕೆ. ರಮೇಶ್‌ ಘಟಿಕೋತ್ಸವ ಭಾಷಣ ಮಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿರುವ ನಾವು ಮುಂದಿನ 25 ವರ್ಷದಲ್ಲಿ ಅಭಿವೃದ್ದಿ ಹೊಂದಿದ ದೇಶ ವಾಗುತ್ತೇವೆ. ಈ ಅವಧಿಯಲ್ಲಿ ಯುವ ಸಮಾಜ ದೇಶಕ್ಕೆ ನೀಡುವ ಕೊಡುಗೆಯೇ ಅತ್ಯಮೂಲ್ಯ. ಸರ್ವರ ಜತೆಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಜನರ ಸೇವೆಯನ್ನು ದೇವರ ಸೇವೆ ಎಂದು ಪರಿಭಾವಿಸಿ ಶ್ರಮಿಸಿದಾಗ ಅದ್ವಿತೀಯ ಶಕ್ತಿ ಸಂಚಲನವಾಗುತ್ತದೆ ಎಂದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡದ ದಿನಗಳಿಂದ ಆರಾಮವನ್ನು ಪಡೆಯಲು ಸಂಗೀತ, ನೃತ್ಯ, ಪುಸ್ತಕ ಓದುವುದು ಸಹಿತ ವಿವಿಧ ಚಟುವಟಿಕೆಗಳನ್ನು ನಡೆಸಿದರೆ ಉತ್ತಮ ಎಂದವರು ಆಶಿಸಿದರು.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಶಿಕ್ಷಣವು ಕೇವಲ ಸತ್ಯಗ ಳನ್ನು ಕಂಠಪಾಠ ಮಾಡುವುದಲ್ಲದೆ ಪ್ರಶ್ನಿಸುವ ಕುತೂ ಹಲ, ಹೊಸತನವನ್ನು ಕಂಡುಕೊಳ್ಳುವಧೈರ್ಯ ಮತ್ತು ಸೇವೆ ಮಾಡುವ ಕರುಣೆಯನ್ನು ಬೆಳೆಸುತ್ತದೆ ಎಂದರು.

Advertisement

ಮಾಹೆ ಮಣಿಪಾಲದ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಅವರು ಆಶಯ ಭಾಷಣ ಮಾಡಿದರು.

ಸಹ ಕುಲಪತಿಗಳಾದ ಡಾ| ನಾರಾಯಣ ಸಭಾಹಿತ್‌, ಡಾ| ಶರತ್‌ ಕೆ. ರಾವ್‌, ಡಾ| ಮಧು ವೀರರಾಘವನ್‌,ಡಾ|ಎನ್‌.ಎನ್‌. ಶರ್ಮ, ಕುಲಸಚಿವ ಡಾ| ಗಿರಿಧರ್‌ ಪಿ. ಕಿಣಿ, ಡಾ| ವಿನೋದ್‌ ವಿ. ಥಾಮಸ್‌ ಉಪಸ್ಥಿತರಿದ್ದರು.
ಸಹ ಕುಲಪತಿ ಡಾ| ದಿಲೀಪ್‌ ಜಿ. ನಾಯ್ಕ ಸ್ವಾಗತಿಸಿದರು. ಕೆಎಂಸಿ ಮಂಗಳೂರು ಡೀನ್‌ ಡಾ| ಉನ್ನಿಕೃಷ್ಣನ್‌ ಬಿ. ವಂದಿಸಿದರು. ಡಾ| ನಂದಿತಾ ಶೆಣೈ ನಿರೂಪಿಸಿದರು.

1,061 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಒಟ್ಟು 1,061 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇವರಲ್ಲಿ ಪದವಿಪೂರ್ವ 784, ಸ್ನಾತಕೋತ್ತರ 160 ಮತ್ತು ಪಿಎಚ್‌ಡಿ 117 ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳಾದ ಅನನ್ಯಾ ಜಾ, ದೀಕ್ಷಾ ಛಾಪರಿಯ, ಶ್ರೇಯಾ ಆರ್‌. ಹಾಗೂ ಹರ್ಷ ಶರ್ಮ ಅವರಿಗೆ ಡಾ| ಟಿ.ಎಂ.ಎ. ಪೈ ಚಿನ್ನದ ಪದಕ ಪುರಸ್ಕಾರವಿತ್ತು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next