ದೇವನಹಳ್ಳಿ: ಕೋವಿಡ್ 19 ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಮಸ್ಕಟ್, ದಮ್ಮಮ್ ಮತ್ತು ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ದೇಶಗಳಿಂದ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 317 ಅನಿವಾಸಿ ಕನ್ನಡಿಗರು ಆಗಮಿಸಿದರು.
ಮಸ್ಕಟ್‌ನಿಂದ 115 ಪ್ರಯಾಣಿಕರು: ಮಸ್ಕಟ್‌ನಿಂದ 6ನೇ ವಿಮಾನದಲ್ಲಿ ಪ್ರಯಾಣಿಸಿರುವ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 115 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆರೋಗ್ಯ ತಪಾಸಣೆ ಬಳಿಕ, 115 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ ಗಾಗಿ ಹೋಟೆಲ್‌ಗಳಿಗೆ ಬಿಎಂಟಿಸಿ ಬಸ್‌ಗಳ ಮೂಲಕ ಕಳುಹಿಸಿಕೊಡಲಾಗಿದೆ.
117 ಮಂದಿ ಸ್ಯಾನ್‌ಫ್ರಾನ್ಸಿಸ್ಕೋದಿಂದ: ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಿಂದ 8ನೇ ವಿಮಾನದ ಮೂಲಕ ಒಟ್ಟು 117 ಮಂದಿ ಅನಿವಾಸಿ ಭಾರತೀಯರು ಪ್ರಯಾಣಿಸಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 117 ಮಂದಿ ಪ್ರಯಾಣಿಕರಲ್ಲಿ 50 ಪುರುಷ, 67 ಮಹಿಳಾ ಪ್ರಯಾಣಿಕರಿದ್ದರು.
ಹೈದರಾಬಾದ್‌ಗೆ 117 ಮಂದಿ ಪ್ರಯಾಣ: ಬಳಿಕ ಏರ್ ಇಂಡಿಯಾ ವಿಮಾನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿತು. ಸರ್ಕಾರದ ನಿರ್ದೇಶ ನದಂತೆ, 117 ಪ್ರಯಾಣಿಕರ ಆರೋಗ್ಯ ತಪಾ ಸಣೆ ನಡೆಸ ಲಾಗಿದ್ದು, ಯಾವುದೇ ಪ್ರಯಾಣಿ ಕರಲ್ಲಿ ಕೊರೊನಾ ಲಕ್ಷಣ ಕಂಡು ಬಂದಿಲ್ಲ. 117 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ ಗಾಗಿ ಹೋಟೆಲ್‌ಗಳಿಗೆ ಬಿಎಂ ಟಿಸಿ ಬಸ್‌ಗಳ ಮೂಲಕ ಕಳುಹಿಸಿಕೊಡಲಾಗಿದ್ದು ಕ್ವಾರಂಟೈನ್ ವೆಚ್ಚ ಭರಿಸಲಿದ್ದಾರೆ.
ಮೇ 11 ರಿಂದ ಇಲ್ಲಿಯವರೆಗೆ 1038 ಪ್ರಯಾಣಿಕರು ವಿವಿಧ ದೇಶಗಳಿಂದ ಬಂದಿದ್ದಾರೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ, ತಹಶೀ ಲ್ದಾರ್ ಅಜಿತ್‌ಕುಮಾರ್ ರೈ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ,ಇಒ ವಸಂತ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರಪುರ ಸಭಾ ಮುಖ್ಯಾಧಿಕಾರಿ ಪ್ರದೀಪ್ ಇದ್ದರು.
ವ್ಯಕ್ತಿಗೆ ಸೊಂಕು ಲಕ್ಷಣ: 7ನೇ ವಿಮಾನದಲ್ಲಿ ದಮ್ಮಮ್ ನಿಂದ ಗರ್ಭಿಣಿಯರು, ಮಕ್ಕಳು ಸೇರಿ ಒಟ್ಟು 85 ಅನಿವಾಸಿ ಭಾರತೀಯರು ಆಗಮಿಸಿ ದ್ದಾರೆ. ಒಟ್ಟು 85 ಮಂದಿ ಪ್ರಯಾಣಿಕರಲ್ಲಿ 6 ಗರ್ಭಿಣಿಯರು, 10 ವರ್ಷದೊಳಗಿನ 4 ಮಕ್ಕಳು ಸೇರಿ 67 ಪುರುಷ, 18 ಮಹಿಳೆ ಯರು ಇದ್ದಾರೆ. ತಜ್ಞ ವೈದ್ಯರು, ಸಿಬ್ಬಂದಿ 85 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದರು. ಇದರಲ್ಲಿ ಒಬ್ಬರಿಗೆ ಕೊರೊ ನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕ್ವಾರಂಟೈನ್‌ಗಾಗಿ ಕಳುಹಿಸಿಕೊಡಲಾಗಿದೆ.