Advertisement

ಅಸ್ಸಾಂ, ಮೇಘಾಲಯದಲ್ಲಿ ಮೇಘ ಸ್ಫೋಟ; ಪ್ರವಾಹ, ಭೂಕುಸಿತ-ಜನರ ಪರದಾಟ; 31 ಮಂದಿ ಸಾವು

12:37 PM Jun 18, 2022 | Team Udayavani |

ಗುವಾಹಟಿ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತ, ಪ್ರವಾಹದಿಂದಾಗಿ ಅಸ್ಸಾಂ ಮತ್ತು ಮೇಘಾಲಯದಲ್ಲಿ 31 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಬಾಲಿವುಡ್ ದಂತಕಥೆ ಬಿ.ಆರ್.ಛೋಪ್ರಾ ಜುಹು ಬಂಗ್ಲೆ 183 ಕೋಟಿ ರೂಪಾಯಿಗೆ ಮಾರಾಟ

ಅಸ್ಸಾಂನ 28 ಜಿಲ್ಲೆಯ 19 ಲಕ್ಷ ಜನರ ಮೇಲೆ ಪರಿಣಾಮ ಬೀರುವಂತಾಗಿದ್ದು, ಸುಮಾರು ಒಂದು ಲಕ್ಷ ಜನರು ನಿರಾಶ್ರಿತ ಶಿಬಿರದಲ್ಲಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ ಅಸ್ಸಾಂನಲ್ಲಿ 12 ಮಂದಿ ಹಾಗೂ ಮೇಘಾಲಯದಲ್ಲಿ 19 ಜನರು ಸಾವನ್ನಪ್ಪಿದ್ದಾರೆ.

ತ್ರಿಪುರಾ ರಾಜಧಾನಿ ಅಗರ್ತಲದಲ್ಲಿ ಭಾರೀ ಪ್ರಮಾಣದ ಪ್ರವಾಹ ವರದಿಯಾಗಿದ್ದು, ಕೇವಲ ಆರು ಗಂಟೆಯ ಅವಧಿಯಲ್ಲಿ ದಾಖಲೆಯ 145 ಮಿಲಿ ಮೀಟರ್ ಮಳೆಯಾಗಿದೆ. ಇದರಿಂದಾಗಿ ತ್ರಿಪುರಾದ ಉಪಚುನಾವಣೆ ಪ್ರಚಾರಕ್ಕೂ ಅಡ್ಡಿಯುಂಟಾಗಿದೆ ಎಂದು ವರದಿ ತಿಳಿಸಿದೆ.

Advertisement

ಮೇಘಾಲಯದ ಮೌಸೈನ್ರಾಮ್ ಮತ್ತು ಚಿರಾಪುಂಜಿಯಲ್ಲಿ 1940ರ ಬಳಿಕದ ದಾಖಲೆಯ ಮಳೆ ಸುರಿದಿದೆ. ಕಳೆದ 60 ವರ್ಷಗಳಲ್ಲಿಯೇ ಅಗರ್ತಲದಲ್ಲಿ ಕಂಡು ಕೇಳರಿಯದ ವರ್ಷಧಾರೆಯಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಭಾರೀ ಪ್ರವಾಹದ ಪರಿಣಾಮ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪ್ರವಾಹದಲ್ಲಿ ಸಾವನ್ನಪ್ಪಿರುವ ಸಂತ್ರಸ್ತರ ಕುಟುಂಬಕ್ಕೆ ಮೇಘಾಲಯ ಮುಖ್ಯಮಂತ್ರಿ ಕೋನಾರ್ಡ್ ಸಂಗ್ಮಾ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಸ್ಸಾಂನ ಅಂದಾಜು 3,000 ಗ್ರಾಮಗಳು ಪ್ರವಾಹದಿಂದ ನಲುಗಿ ಹೋಗಿದೆ. 43,000 ಹೆಕ್ಟೇರ್ ಗಳಷ್ಟು ಬೆಳೆ ಪ್ರವಾಹದಿಂದ ನಾಶವಾಗಿದೆ.

ಪ್ರವಾಹ ಪರಿಸ್ಥಿತಿ ಮತ್ತು ಕೇಂದ್ರದ ನೆರವು ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next