Advertisement

Snowfall: ಭಾರೀ ಹಿಮಪಾತ… ಅಟಲ್ ಸುರಂಗದ ಬಳಿ ಸಿಲುಕಿಕೊಂಡ 300 ಪ್ರವಾಸಿಗರ ರಕ್ಷಣೆ

01:30 PM Jan 31, 2024 | Team Udayavani |

ಶಿಮ್ಲಾ: ಭಾರೀ ಹಿಮಪಾತದಿಂದ ಹಿಮಾಚಲ ಪ್ರದೇಶದ ರೋಹ್ಟಾಂಗ್‌ನ ಅಟಲ್ ಸುರಂಗದ ದಕ್ಷಿಣ ಪೋರ್ಟಲ್ (ಎಸ್‌ಪಿ) ಬಳಿ ಸಿಲುಕಿದ್ದ 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶ ಪೊಲೀಸರು ರಕ್ಷಣೆ ಮಾಡಿದ್ದಾರೆ.

Advertisement

ಈ ಕುರಿತು ಹೇಳಿಕ ನೀಡಿದ ಕುಲು ಎಸ್‌ಪಿ ಸಾಕ್ಷಿ ವರ್ಮಾ, “ಎಟಿಆರ್‌ನ ಸೌತ್ ಪೋರ್ಟಲ್ ಬಳಿ ಸುಮಾರು 50 ಪ್ರವಾಸಿಗರ ವಾಹನಗಳು ಮತ್ತು ಒಂದು ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ ಸೇರಿದ ಬಸ್ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿದ್ದರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಿಮಾಚಲದಲ್ಲಿ ಹವಾಮಾನ ಹೇಗಿರಲಿದೆ?
ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಹಿಮಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಾಧ್ಯತೆಯಿರಲಿದ್ದು. ಅಲ್ಲದೆ, ರಾಜ್ಯದ ಕೆಳಗಿನ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಲ್ಲಿ ಸಾಂದರ್ಭಿಕ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಲಕ್ಷಣಗಳು ಇರಲಿದೆ ಅಷ್ಟು ಮಾತ್ರವಲ್ಲದೆ ಬೆಟ್ಟದ ಮಧ್ಯಭಾಗದ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಗಳು ಇರಲಿದೆ ಎಂದಿದೆ.

ಈ ಅವಧಿಯಲ್ಲಿ ಸರಾಸರಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ, ಆದರೆ ಕೆಳಗಿನ ಬೆಟ್ಟಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ಮತ್ತು ಮಧ್ಯ ಮತ್ತು ಎತ್ತರದ ಬೆಟ್ಟಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಿದೆ.

ಇದನ್ನೂ ಓದಿ: Throws Mic: ಸಂಗೀತ ಕಾರ್ಯಕ್ರಮದ ವೇಳೆ ಪ್ರೇಕ್ಷಕರ ಮೇಲೆ ಮೈಕ್ ಎಸೆದ ಪಾಕ್ ಗಾಯಕ

Advertisement

Advertisement

Udayavani is now on Telegram. Click here to join our channel and stay updated with the latest news.

Next