Advertisement

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

10:04 AM Mar 04, 2021 | Team Udayavani |

ಎರಡು ತಿಂಗಳು ಕಳೆದೇ ಹೋಗಿದೆ. ಈ ಎರಡು ತಿಂಗಳಲ್ಲಿ ನಿಧಾನವಾಗಿ ಕನ್ನಡ ಚಿತ್ರರಂಗ ಕೂಡಾ ಸಹಜ ಸ್ಥಿತಿಗೆ ಮರಳಿದೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಕರೆಸಿದ ಖ್ಯಾತಿ “ಪೊಗರು’ ಚಿತ್ರಕ್ಕೆ ಸಲ್ಲುತ್ತದೆ. ಎಲ್ಲಾ ಓಕೆ, ಈ ಎರಡು ತಿಂಗಳಲ್ಲಿ ಎಷ್ಟು ಸಿನಿಮಾಗಳು ತೆರೆಕಂಡಿರಬಹುದು ಎಂಬ ಕುತೂಹಲ ಸಹಜ. ಏಕೆಂದರೆ ಈಗಷ್ಟೇ ಚೇತರಿಕೆಯ ಹಾದಿಯಲ್ಲಿರುವ ಚಿತ್ರರಂಗದಲ್ಲಿ ಯಾರೆಲ್ಲಾ ಸಿನಿಮಾ ಬಿಡುಗಡೆ ಮಾಡುವ ಧೈರ್ಯ ಮಾಡಿದ್ದಾರೆಂಬುದು ಕೂಡಾ ಮುಖ್ಯವಾಗುತ್ತದೆ.

Advertisement

ಜನವರಿ ಹಾಗೂ ಫೆಬ್ರವರಿಯಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಲೆಕ್ಕ ಹಾಕಿ ಹೇಳ್ಳೋದಾದರೆ 30 ಸಿನಿಮಾಗಳು. ಹೌದು, ಇಲ್ಲಿವರೆಗೆ ಈ ವರ್ಷ ಬಿಡುಗಡೆಯಾಗಿರೋದು 30 ಸಿನಿಮಾಗಳು. ಜನವರಿಯಲ್ಲಿ 12 ಹಾಗೂ ಫೆಬ್ರವರಿಯಲ್ಲಿ 18 ಸಿನಿಮಾಗಳು ತೆರೆಕಂಡಿವೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಜನವರಿಗಿಂತ ಫೆಬ್ರವರಿಯಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಇದು ಚಿತ್ರರಂಗ ಚೇತರಿಕೆಯ ಹಾದಿಯಲ್ಲಿರೋದನ್ನು ತೋರಿಸುತ್ತದೆ.

ಇದನ್ನೂ ಓದಿ:ರಾಜಕೀಯ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್ : ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್

ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಕಡಿಮೆಯೇ. ಕಳೆದ ಆರಂಭದ ಎರಡು ತಿಂಗಳಲ್ಲಿ (ಜನವರಿ-ಫೆಬ್ರವರಿ) ಬರೋಬ್ಬರಿ 51 ಸಿನಿಮಾಗಳು ತೆರೆಕಂಡಿದ್ದವು. ಈ ವರ್ಷ ಅದರ ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಆದರೆ, ಕೊರೊನಾದಿಂದಾಗಿ ಸಿನಿಮಾಗಳು ತಮ್ಮ ಬಿಡುಗಡೆ ಯನ್ನು ಮುಂದಕ್ಕೆ ಹಾಕಿವೆ. ಇದು ಒಂದು ಕಾರಣವಾದರೆ ಸ್ಟಾರ್‌ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿ ದ್ದರಿಂದ ಒಂದಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯ ಲೆಕ್ಕಾಚಾರದಲ್ಲೇ ತೊಡಗಿವೆ.

Advertisement

ಈ ವಾರ ಮೂರು

ಕಳೆದ ವಾರ ಬರೋಬ್ಬರಿ ಎಂಟು ಚಿತ್ರಗಳು ತೆರಕಂಡಿದ್ದವು. ಆದರೆ, ಈ ವಾರ ಕೇವಲ ಮೂರು ಚಿತ್ರಗಳಷ್ಟೇ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ರಿಷಭ್‌ ಶೆಟ್ಟಿ ಅಭಿನಯದ “ಹೀರೋ’ ಜೊತೆಗೆ ಹೊಸಬರ “ರಕ್ತ ಗುಲಾಬಿ’ ಹಾಗೂ “ಧೀರಂ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮುಂದಿನ ವಾರ ಮತ್ತೆ ಬಿಡುಗಡೆಯಲ್ಲಿ ಕುಸಿತ ಕಾಣಲಿದೆ. ಅದಕ್ಕೆ ಕಾರಣ “ರಾಬರ್ಟ್‌’. ದರ್ಶನ್‌ ಅವರ “ರಾಬರ್ಟ್‌’ ಚಿತ್ರ ತೆರೆ ಕಾಣುತ್ತಿದ್ದು, ಆ ಚಿತ್ರದ ಮುಂದೆ ಬೇರೆ ಯಾವ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next