ಕುಷ್ಟಗಿಯ ಪ್ರಸನ್ನಕುಮಾರ ಹಿರೇಮಠ ಅವರು ರಂಜಾನ್ ಮಾಸ ಆರಂಭವಾದಾಗಿನಿಂದ ರಂಜಾನ ಮಾಸದ ಕೊನೆಯ 30 ದಿನಗಳವರೆಗೆ ಉಪವಾಸ ತಪ್ಪದೇ ಆಚರಿಸಿದ್ದಾರೆ. 1994ರಿಂದ ಪ್ರತಿ ವರ್ಷ 11 ದಿನ ಹಾಗೂ 21 ದಿನ ರೋಜಾ ಮಾಡುತ್ತಿದ್ದ ಪ್ರಸನ್ನಕುಮಾರಈ ಬಾರಿ ಬರೋಬ್ಬರಿ 30 ದಿನಗಳವರೆಗೆ ಆಚರಿಸಿದ್ದಾರೆ. ಅಲ್ಲದೇ ರಂಜಾನ್ ಹಬ್ಬದಂದು ಈದ್ಗಾದಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾನೆ.
Advertisement
ರಂಜಾನ ಮಾಸದಲ್ಲಿ ಪ್ರತಿ ನಿತ್ಯ ಸಂಜೆ ಜಾಮೀಯ ಮಸೀಧಿಗೆ ಹೋಗಿ ಮುಸ್ಲಿಂ ಸಮುದಾಯವರೊಂದಿಗೆ ಸಾಮೂಹಿಕ ಪ್ರಾರ್ಥನೆ ಬಳಿಕ, ಹಣ್ಣು, ಪಾನಕ ಲಘು ಉಪವಾಸ ಸೇವಿಸಿ ಉಪವಾಸ ಕೊನೆಗೊಳಿಸುತ್ತಿದ್ದ.
———–
ರಂಜಾನ್ ಮಾಸದಲ್ಲಿ ಪ್ರತಿ ದಿನ ರೋಜಾದಿಂದ ನನ್ನ ಆರೋಗ್ಯ ಸ್ಥಿರವಾಗಿದೆ. ನನ್ನ ಸಂಕಲ್ಪದಿಂದ ತಾಯಿಯ ಆರೋಗ್ಯ ಸುಧಾರಿಸಿದೆ. ನನ್ನ ದೈನಂದಿನ ವ್ಯವಹಾರ ಸುಧಾರಣೆ ನನ್ನಲ್ಲಿ ಸಂತೃಪ್ತ ಭಾವನೆ ಬಂದಿದೆ. ನನ್ನ ತಾಯಿ, ಪತ್ನಿ ಸಹಕರಿಸಿ, ಪ್ರೋತ್ಸಾಹಿಸಿದರಲ್ಲದೇ, ಮನೆಯಲ್ಲಿ ಖುಷಿಯ ವಾತವರಣ ಇದೆ. ಇದಕ್ಕಿಂತ ಮಿಗಿಲಾಗಿ ಹಿಂದು-ಮುಸ್ಲಿಂ ಸೌಹಾರ್ಧಯುತಕ್ಕೆ ನನ್ನ ಕೈಲಾದ ಮಟ್ಟಿಗೆ ಅಳಿಲು ಸೇವೆ ಸಲ್ಲಿಸುತ್ತಿರುವೆ.