ಕೆಜಿಎಫ್: ಶ್ರೀನಿವಾಸಸಂದ್ರ ಗ್ರಾಪಂನ ಬೆಂಡವಾರ ಗ್ರಾಮದಲ್ಲಿ 30 ಕೋಟಿ ವೆಚ್ಚದಲ್ಲಿ 66 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮತ್ತು ಕ್ಯಾಸಂಬಳ್ಳಿಯಲ್ಲಿಹೊಸ ಪೊಲೀಸ್ ಠಾಣೆ ಆರಂಭವಾಗಲಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಕ್ಯಾಸಂಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಜನತೆಗೆ ವಿದ್ಯುತ್ ಸಮಸ್ಯೆ ತೀವ್ರ ವಾಗಿತ್ತು. ಜಾಗದ ಕೊರತೆಯಿಂದಾಗಿಸ್ಟೇಷನ್ ನಿರ್ಮಾಣ ತಡವಾಗಿತ್ತು. ಈಗ ನಾಲ್ಕು ಎಕರೆ ಜಾಗ ಗುರುತಿಸಿನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಶುರುವಾಗಿದೆ ಎಂದರು.
ಠಾಣೆ ಶೀಘ್ರ ಕಾರ್ಯಾರಂಭ: ಕ್ಯಾಸಂಬಳ್ಳಿ ಮತ್ತು ಸುತ್ತಮುತ್ತಲಿನಜನತೆಯ ಬಹುದಿನದ ಬೇಡಿಕೆಯಾಗಿದ್ದ ಕ್ಯಾಸಂಬಳ್ಳಿ ಪೊಲೀಸ್ ಠಾಣೆಕೂಡ ಶೀಘ್ರಕಾರ್ಯಾರಂಭ ಮಾಡಲಿದೆ. ಚಾಂಪಿಯನ್ ರೀಫ್ಸ್ ಠಾಣೆ ರದ್ದುಗೊಳಿಸಿ, ಕ್ಯಾಸಂಬಳ್ಳಿಯಲ್ಲಿ ಠಾಣೆ ನಿರ್ಮಾಣ ಮಾಡಲಾಗುವುದು. ಇತ್ತೀಚಿಗೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಕ್ಯಾಸಂಬಳ್ಳಿಯಲ್ಲಿ ಠಾಣೆಗೆ ಒಂದು ತಿಂಗಳೊಳಗೆ ಜಾಗ ನೀಡಿದರೆ ತಕ್ಷಣಠಾಣೆ ಪ್ರಾರಂಭ ಮಾಡುವುದಾಗಿ ಅವರುಭರವಸೆ ನೀಡಿದ್ದರು. ಅದರಂತೆ ಬಸವನ ಗುಡಿಯಲ್ಲಿ ಹೊಸ ಠಾಣೆಗೆ ಕಟ್ಟಡ ಗುರುತಿಸಲಾಗಿದೆ ಎಂದು ಹೇಳಿದರು.
ಕೆ.ಸಿ.ರೆಡ್ಡಿ ಮನೆ ಸ್ಮಾರಕ: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ. ಚೆಂಗಲರಾಯರೆಡ್ಡಿ (ಕೆ.ಸಿ.ರೆಡ್ಡಿ) ಅವರ ಜನ್ಮಸ್ಥಳ ಕ್ಯಾಸಂಬಳ್ಳಿ ಮನೆ ಸ್ಮಾರಕವನ್ನಾಗಿ ಮಾಡಲಾಗುವುದು. ಮುಖ್ಯಮಂತ್ರಿಗಳ ಅನುದಾನದಿಂದ ಒಂದು ಕೋಟಿ ಬಿಡುಗಡೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಮಾರಕವನ್ನಾಗಿ ಮಾಡಲಿದೆ. ರಾಮಾಪುರ ಬಳಿ 10 ಕೋಟಿ ವೆಚ್ಚದಲ್ಲಿ ಸಂಕೀರ್ಣ ಕಟ್ಟಲು 3 ಕೋಟಿ ಬಿಡುಗಡೆಯಾಗಿದೆ. ಅಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗುವುದು ಎಂದು ರೂಪಕಲಾ ಹೇಳಿದರು.
ಶ್ರೀನಿವಾಸಸಂದ್ರಗ್ರಾಪಂನಪೀಲವಾರ, ಗಡ್ಡೂರು, ಬುಲ್ಲಂಪಲ್ಲಿ, ಕರಡಗೂರು, ಕಂಗಾಂಡ್ಲಹಳ್ಳಿ ಪಂಚಾಯಿತಿಯಮೋತಕಪಲ್ಲಿ, ಕ್ಯಾಸಂಬಳ್ಳಿ ಹೋಬಳಿಯಮಡಿವಾಳ, ಜಕ್ಕರಸಕುಪ್ಪ ಗ್ರಾಪಂನ ಜಕ್ಕರಸಕುಪ್ಪ, ಸಂಗನಹಳ್ಳಿ, ಕುರುಬೂರುಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾ ಕೃಷ್ಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ನಾರಾಯಣರೆಡ್ಡಿ,ಎಪಿಎಂಸಿಅಧ್ಯಕ್ಷವಿಜಯರಾಘವರೆಡ್ಡಿ, ಕುರುಬರ ಸಂಘದಜಿಲ್ಲಾ ಉಪಾಧ್ಯಕ್ಷ ಆನಂದಮೂರ್ತಿ, ವಕೀಲ ಪದ್ಮನಾಭರೆಡ್ಡಿ, ಎನ್‌ಟಿಆರ್, ಶ್ರೀಧರರೆಡ್ಡಿ ಮತ್ತಿತರರು ಹಾಜರಿದ್ದರು.