Advertisement
ಕೇರಳ ಕ್ಯಾಬಿನೆಟ್ ಅನುಮೋದಿಸಿದ್ದ 2011ರ “118 ಎ’ ಪೊಲೀಸ್ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಸಹಿ ಹಾಕಿದ್ದಾರೆ. ಇದರ ಅನ್ವಯ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್ ಬೆದರಿಕೆಯೊಡ್ಡುವವರಿಗೆ ಕನಿಷ್ಠ 3 ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಎಲ್‌ಡಿಎಫ್ ಸರಕಾರ ಮುಂದಾಗಿದೆ.
Related Articles
ಕನಿಷ್ಠ ಮೂರು ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡೂ ಶಿಕ್ಷೆ
Advertisement
ಯಾರಿಗೆ ಕಾಯ್ದೆ ಬಿಸಿ?ಸಾಮಾಜಿಕ ಜಾಲತಾಣ, ಸಮೂಹ ಮಾಧ್ಯಮಗಳಲ್ಲಿ ಮಹಿಳೆ- ಮಕ್ಕಳ ವಿರುದ್ಧ ಬೆದರಿಕೆ ಒಡ್ಡುವವರಿಗೆ.
ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಸನ್ನೆ ಮಾಡುವವರಿಗೆ.
ಸ್ತ್ರೀ ಗೌರವಕ್ಕೆ ಚ್ಯುತಿ ತರುವವರಿಗೆ.
ಮಹಿಳೆಯ ಖಾಸಗೀತನಕ್ಕೆ ಧಕ್ಕೆ ತರುವ ಫೋಟೋ, ವೀಡಿಯೋ ಚಿತ್ರೀಕರಿಸುವವರಿಗೆ. ಬೇರೆ ರಾಜ್ಯಗಳಲ್ಲಿ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 354, 354 ಎ ಜತೆಗೆ ಐಟಿ ಆ್ಯಕ್ಟ್ ಅನ್ವಯ ಶಿಕ್ಷೆ ವಿಧಿಸಲಾ ಗುತ್ತದೆ. ಅಪರಾಧದ ಗಂಭೀರತೆ ಆಧರಿಸಿ, ಕನಿಷ್ಠ 2 ವರ್ಷ ಜೈಲು ಶಿಕ್ಷೆ ಜಾರಿ ಮಾಡಲಾಗುತ್ತದೆ.
ಪ.ಬಂಗಾಲ ಮಹಿಳೆ ವಿರುದ್ಧದ ಸೈಬರ್ ಅಪರಾಧವನ್ನು “ವರ್ಚು ವಲ್ ರೇಪ್’ ಅಂತಲೇ ಪರಿಗಣಿಸಿದೆ.
ಮಹಾರಾಷ್ಟ್ರದಲ್ಲಿ ಐಟಿ ಆ್ಯಕ್ಟ್ ಅನ್ವಯ 5-7 ವರ್ಷ ಜೈಲು ಪೊಲೀಸ್ ತಿದ್ದುಪಡಿ ಕಾಯ್ದೆ ಪ್ರತಿಯೊಬ್ಬರ ಖಾಸಗಿ ಹಕ್ಕುಗಳನ್ನು ಸಂರಕ್ಷಿಸುತ್ತದೆ. ಇದರಿಂದ ವಾಕ್ ಸ್ವಾತಂತ್ರ್ಯ ಅಥವಾ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಯಾವುದೇ ಧಕ್ಕೆ ಇಲ್ಲ.
ಪಿಣರಾಯ್ ವಿಜಯನ್, ಕೇರಳ ಸಿಎಂ