Advertisement
ತುಮಕೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತನಿಖಾ ತಂಡ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದಿದ್ದು, ಜಿಲ್ಲಾ ಆರೋಗ್ಯ ಕರಾರು ಒಪ್ಪಂದದ ಪ್ರಕಾರ ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷ್ಯತನ ಬೇಜವಾಬ್ದಾರಿತನ ತೋರಿದ ಹಿನ್ನೆಲೆ ಡಾ.ಪೂಜಾ ಎಂಬವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
Related Articles
Advertisement
ಪಾವಗಡ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಕಿರಣ್ ಅವರ ನಿರ್ಲಕ್ಷ್ಯದಿಂದ ಮೂವರು ಮಹಿಳೆಯರು ಮರಣ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಡಾ.ಕಿರಣ್ ಬಂದಾಗಿಂದ ಆಸ್ಪತ್ರೆ ಹದಗಟ್ಟಿದ್ದು, ಇವರು ಡಾಕ್ಟರ್ ವೃತ್ತಿಗಿಂತ ರಾಜಕೀಯದಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಇವರಿಂದಾಗಿ ಇಲ್ಲಿ ಬೇರೆ ವೈದ್ಯರು ಕೆಲಸ ಮಾಡಲು ಬರುತ್ತಿಲ್ಲ ಎಂದು ಸಂಘ ಸಂಸ್ಥೆಗಳು ಮುಖಂಡರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಕನ್ನಡ ರಕ್ಷಣೆಯ ವೇದಿಕೆಯ ಸದಸ್ಯರು, ಜಯಕರ್ನಾಟಕ ಸದಸ್ಯರು ಹಾಜರಿದ್ದರು.