Advertisement

ನೈಸ್‌ ರಸ್ತೆಯಲ್ಲಿ ಕಾರು ಪಲ್ಟಿ:3 ವಿದ್ಯಾರ್ಥಿನಿಯರ ದುರ್ಮರಣ 

02:46 PM Mar 09, 2018 | Team Udayavani |

ಬೆಂಗಳೂರು: ನಗರದ ಹೊರವಲಯದ ಕೊಪ್ಪ ಗೇಟ್‌ ಬಳಿಯ ನೈಸ್‌ ರಸ್ತೆಯಲ್ಲಿ ವಿದ್ಯಾರ್ಥಿಗಳು ಔಟಿಂಗ್‌ ಮುಗಿಸಿ ವಾಪಾಸಗುತ್ತಿದ್ದ ಕಾರೊಂದು ಪಲ್ಟಿಯಾಗಿ ಮೂವರು ಎಂಬಿಎ ವಿದ್ಯಾರ್ಥಿನಿಯರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅವಘಡ ಶುಕ್ರವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ. 

Advertisement

ಆನೇಕಲ್‌ನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳು ಬಾಡಿಗೆಗೆ ಕಾರನ್ನು ಪಡೆದು ಪ್ರವಾಸಕ್ಕೆ ತೆರಳಿ ವಾಪಾಸಗುತ್ತಿದ್ದ ವೇಳೆ ನೈಸ್‌ ಸೇತುವೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ವಿದ್ಯಾರ್ಥಿಗಳಾದ ಹರ್ಷಾ ಶ್ರೀವಾಸ್ತವ, ಆಶ್ರಯ ಮತ್ತು ಶ್ರುತಿ  ಸಾವನ್ನಪ್ಪಿದ್ದು, ಪ್ರವೀಣ್‌ ಮತ್ತು ಪವಿತ್‌ ಕೊಹ್ಲಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವಿದ್ಯಾರ್ಥಿನಿಯರು ಆಂಧ್ರ, ಕೇರಳ ಮತ್ತು ಜಾರ್ಖಂಡ್‌ ಮೂಲದವರೆಂದು ತಿಳಿದು ಬಂದಿದೆ. 

ಹುಳಿಮಾವು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next