ಶಿಲ್ಲಾಂಗ್: ಮೇಘಾಲಯದಲ್ಲಿ ಆಡಳಿತದಲ್ಲಿ ಇರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ)ಯ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಜತೆಗೆ ಟಿಎಂಸಿಯ ಶಾಸಕರೊಬ್ಬರೂ ಸ್ಪೀಕರ್ಗೆ ತಮ್ಮ ತ್ಯಾಗಪತ್ರಗಳನ್ನು ಸಲ್ಲಿಸಿದ್ದಾರೆ. ಮೂವರು ಕೂಡ ಶೀಘವೇ ನವದೆಹಲಿಗೆ ತೆರಳಿ ಬಿಜೆಪಿಗೆ ಸೇರಲಿದ್ದಾರೆ.
ಎನ್ಪಿಪಿಯ ಶಾಸಕರಾದ ಫರ್ಲಿನ್ ಸಂಗ್ಮಾ, ಬೆನೆಡಿಕ್ ಮಾರ್ಕ್, ಟಿಎಂಸಿಯ ಎಚ್.ಎಂ.ಶಾಂಗ್ಪ್ಲಿಯಾಂಗ್ ರಾಜೀನಾಮೆ ನೀಡಿದವರು.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್ಪಿಪಿ 21, ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿ 8, ಪೀಪಲ್ಸ್ ಡೆಮಾಕ್ರಾಟಿಕ್ ಫ್ರಂಟ್ 4, ಬಿಜೆಪಿ 2, ಎಚ್ಎಸ್ಪಿಡಿಪಿ 2, ಸ್ವತಂತ್ರರು 7, ಟಿಎಂಸಿ 11, ಎಚ್ಎನ್ಎಎಂ ಮತ್ತು ಎನ್ಸಿಪಿ ತಲಾ 1 ಸ್ಥಾನಗಳನ್ನು ಹೊಂದಿವೆ.