Advertisement

ವಿಶಾಖಪಟ್ಟಣಂನಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು, 10 ಮಂದಿಗೆ ಗಾಯ

12:38 PM Apr 04, 2024 | Team Udayavani |

ಆಂಧ್ರಪ್ರದೇಶ: ಪ್ರವಾಸಿಗರು ತೆರಳುತ್ತಿದ್ದ ವ್ಯಾನ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ಹತ್ತು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸಂಭವಿಸಿದೆ.

Advertisement

ಮೃತರನ್ನು ಹನುಮಂತು ಆನಂದ ರಾವ್ (45), ಹನುಮಂತು ಶೇಖರ್ ರಾವ್ (15), ಮತ್ತು ಚಿಂತಾಡಿ ಇಂದು (65) ಎನ್ನಲಾಗಿದ್ದು ಅವರು ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mangaluru: ಗಡಿಪಾರಿನ ಮೂಲಕ ಬಜರಂಗದಳ ಮಟ್ಟ ಹಾಕುತ್ತೇವೆ ಎಂಬುದು ಭ್ರಮೆ: ಪುನೀತ್ ಅತ್ತಾವರ

Advertisement

Udayavani is now on Telegram. Click here to join our channel and stay updated with the latest news.

Next