Advertisement

ಕಾರು -ವ್ಯಾನ್‌ ಢಿಕ್ಕಿ : ಮೂವರ ಸಾವು; ನಾಲ್ವರು ಗಂಭೀರ

04:24 PM Jul 06, 2018 | Team Udayavani |

ಬಹರೇಚ್‌,ಉತ್ತರ ಪ್ರದೇಶ : ಇಂದು ಬೆಳಗ್ಗೆ ಇಲ್ಲಿನ ಲಕ್ನೋ – ಬಹರೇಚ್‌ ರಸ್ತೆಯಲ್ಲಿ ವ್ಯಾನ್‌ ಗೆ ಕಾರು ಢಿಕ್ಕಿಯಾದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಫ‌ಕರ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶಕ್ಕೆ ಒಳಪಡುವ ಸಂತ ಪಥಿಕ್‌ ಶಾಲೆಯ ಸಮೀಪ ಈ ಅವಘಡ ಸಂಭವಿಸಿತು.

ಮೃತರನ್ನು ಸಜ್ಜದ್‌ 25, ಮತ್ತು ಆತನ ಆತನ ಸಹೋದರ ಕರೀಮ್‌ 27 ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರ ಪೈಕಿ ಸಂಧೀಸ್‌ 22 ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಎಸ್‌ಪಿ ಸಭಾರಾಜ್‌ ಸಿಂಗ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next