Advertisement

ಗಗನಯಾನಕ್ಕೆ 3 ಭಾರತೀಯರು

12:30 AM Dec 29, 2018 | Team Udayavani |

ನವದೆಹಲಿ: ಭಾರತೀಯರ ಬಹುದಿನಗಳ ಗಗನಯಾನ ಕನಸು ನನಸಾಗುವ ದಿನಗಳು ಹತ್ತಿರಕ್ಕೆ ಬಂದಿದ್ದು, ಕೇಂದ್ರ ಸರ್ಕಾರ ಮೂವರನ್ನು ಗಗನಯಾತ್ರೆಗೆ ಕಳುಹಿಸಲು ಒಪ್ಪಿಗೆ ನೀಡಿದೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 10 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಗಗನಯಾತ್ರೆಗೆ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. 2022ರ ಒಳಗಾಗಿ ಭಾರತದ ಮೂವರನ್ನು ಗಗನಯಾತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಈ ಯಾತ್ರಿಗಳು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಈ ಯೋಜನೆಗೆ ಯಶಸ್ಸು ಸಿಕ್ಕಿದ್ದೇ ಆದರೆ, ಭಾರತ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸಿದ ನಾಲ್ಕನೇ ದೇಶವಾಗಿ ಗುರುತಿಸಿಕೊಳ್ಳಲಿದೆ.

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಎರಡು ಮಾನವ ರಹಿತ ವಿಮಾನಗಳು ಮತ್ತು ಒಂದು ಮಾನವ ಸಹಿತ ವಿಮಾನಗಳು ಈ ಯೋಜನೆಯನ್ವಯ ನಭಕ್ಕೆ ನೆಗೆಯಲಿವೆ. 

10 ಸಾವಿರ ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿ, ಮೂಲ ಸೌಕರ್ಯ ನಿರ್ವಹಣೆ ಮತ್ತು ಇತರ ಅಗತ್ಯಕ್ಕೆ ಬಳಕೆ ಮಾಡಲಾಗುತ್ತದೆ. ಮಾನವ ಸಹಿತ ಗಗನ ಯಾನಕ್ಕೆ ಇಸ್ರೋ ಜಿಎಸ್‌ಎಲ್‌ವಿ ಮಾರ್ಕ್‌-3 ಬಾಹ್ಯಾಕಾಶ ನೌಕೆ ಬಳಕೆ ಮಾಡಲಿದೆ. 

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದಲೇ ಈ ರಾಕೆಟ್‌ ಅಂತರಿಕ್ಷಕ್ಕೆ ಚಿಮ್ಮಲಿದೆ. ಇಸ್ರೋ ಪ್ರಕಾರ ಇನ್ನು 40 ತಿಂಗಳಲ್ಲಿ ಮೊದಲ ಯೋಜನೆ ಜಾರಿಯಾಗಲಿದೆ. ಮೊದಲಿಗೆ ಮಾನವ ರಹಿತ ವಿಮಾನಗಳನ್ನು ಕಳುಹಿಸಿ ಪರೀಕ್ಷೆ ಮಾಡಿ, ಕೊನೆಗೆ ಮಾನವ ಸಹಿತ ವಿಮಾನವನ್ನು ಅಂತರಿಕ್ಷಕ್ಕೆ ಕಳುಹಿಸಲಾಗುತ್ತದೆ. ಅಂತರಿಕ್ಷಕ್ಕೆ ತೆರಳುವ ಯಾತ್ರಿಗಳನ್ನು ವ್ಯೋಮಯಾತ್ರಿಗಳು ಎಂದು ಕರೆಯಲು ಭಾರತ ಚಿಂತನೆ ನಡೆಸಿದೆ.

Advertisement

2022ರ ಗಡುವಿನ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಡಾ. ಕೆ. ಸಿವನ್‌, ಇದು ಅಲ್ಪ ಕಾಲಾವಧಿಯಾಗಿದ್ದು, ಆದರೂ ಇಸ್ರೋ ಸಾಧಿಸಿಯೇ ತೀರುತ್ತದೆಎಂದು ಹೇಳಿದ್ದಾರೆ. ಈಗಾಗಲೇ ಈ ಯೋಜನೆಗೆ ರಷ್ಯಾ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತದ ಜತೆ ಒಪ್ಪಂದ ಮಾಡಿಕೊಂಡಿದೆ. 

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು
ದೇಶದಲ್ಲಿ ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ ನೀಡುವಂಥವರಿಗೆ ಗಲ್ಲು ಶಿಕ್ಷೆ ನೀಡುವ ಬಗ್ಗೆ ಕೇಂದ್ರ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿದೆ. ಅದಕ್ಕಾಗಿ ಪೋಕೊÕà ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕಾಯ್ದೆಯ ಸೆಕ್ಷನ್‌ 4, 5, 6, 9, 14, 15 ಮತ್ತು 42ಕ್ಕೆ ತಿದ್ದುಪಡಿ ತರಲಾಗುತ್ತದೆ. ಪ್ರಸ್ತಾವಿತ ತಿದ್ದುಪಡಿ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡುವವರಿಗೆ ಗಲ್ಲು  ಸೇರಿದಂತೆ ಕಠಿಣ ಶಿಕ್ಷೆ ನೀಡುವ ಬಗ್ಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. 

ಮಕ್ಕಳನ್ನು ಒಳಗೊಂಡಿರುವ ಅಶ್ಲೀಲ ಚಿತ್ರಗಳನ್ನು ಹೊಂದಿರುವುದಕ್ಕೆ ಮತ್ತು ಅದನ್ನು ಡಿಲೀಟ್‌ ಮಾಡದೇ ಇರುವ  ಅಪರಾಧಕ್ಕಾಗಿ ಭಾರಿ ಮೊತ್ತದ ನಗದು ರೂಪದಲ್ಲಿ ಭಾರಿ ಮೊತ್ತದ ದಂಡ ವಿಧಿಸಲೂ ಪ್ರಸ್ತಾಪಿಸಲಾಗಿದೆ. ಇದರ ಜತೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವಂತೆ ನಿಯಮದಲ್ಲಿ ಬದಲು ಮಾಡಲು ಕೇಂದ್ರ ಸಂಪುಟ ಸಮ್ಮತಿಸಿದೆ.

ಆರು ಸಂಸ್ಥೆಗಳ ನಿಗದಿ: ಕರ್ನಾಟಕದ ಕುದುರೆಮುಖ ಕಬ್ಬಿಣ ಅದಿರು ನಿಯಮಿತ ಸಂಸ್ಥೆಯಲ್ಲಿರುವ ಷೇರುಗಳ ಖರೀದಿಗಾಗಿ ಆರು ಸಾರ್ವಜನಿಕ ಸಂಸ್ಥೆಗಳನ್ನು ನಿಯೋಜನೆ ಮಾಡಿದೆ. ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರದ ಹೂಡಿಕೆ ಇರುವ ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌, ಟೆಲೆಕಮ್ಯೂನಿಕೇಷನ್ಸ್‌ ಲಿಮಿಟೆಡ್‌, ರೈಲ್‌ ಟೆಲ್‌ ಕಾರ್ಪೊರೇಷನ್‌ ಇಂಡಿಯಾ ಲಿಮಿಟೆಡ್‌, ನ್ಯಾಷನಲ್‌ ಸೀಡ್‌ ಕಾರ್ಪ್‌ ಇಂಡಿಯಾ ಲಿಮಿಟೆಡ್‌, ವಾಟರ್‌ ಆ್ಯಂಡ್‌ ಪವರ್‌ ಕನ್ಸಲ್ಟೆನ್ಸಿ ಸರ್ವಿಸಸ್‌ (ಇಂಡಿಯಾ) ಲಿಮಿಟೆಡ್‌, ಎಫ್ಸಿಐ ಅರವಾಳಿ ಜಿಪ್ಸಮ್‌ ಆ್ಯಂಡ್‌ ಮಿನರಲ್ಸ್‌ ಲಿಮಿಟೆಡ್‌ ಸಂಸ್ಥೆಗಳು ಷೇರುಗಳ ಖರೀದಿಗೆ ಒಪ್ಪಿಗೆ ಸೂಚಿಸಿವೆ. 

ಪರಿಷ್ಕೃತ ನಿಯಮಕ್ಕೆ ಅನುಮೋದನೆ: 
ಕರಾವಳಿ ತೀರ ರಕ್ಷಣಾ ಅಧಿನಿಯಮ 2018ಕ್ಕೆ ಕೂಡ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಹಿಂದಿನ ನಿಯಮದ ಅನ್ವಯ ತೀರ ಪ್ರದೇಶದಲ್ಲಿ ನಿರ್ಮಾಣ ಮತ್ತು ಇತರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ. ಹೀಗಾಗಿ, ಉದ್ಯಮ ಕ್ಷೇತ್ರ ಮತ್ತು ಹಲವು ರಾಜ್ಯಗಳಿಂದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅದಕ್ಕೆ ಒಪ್ಪಿಗೆ ನೀಡಿದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ತೀರ ಪ್ರದೇಶಗಳಲ್ಲಿ ಹೆಚ್ಚಿನ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಿದೆ. ಈ ನಿರ್ಧಾರದಿಂದಾಗಿ ಸಮುದ್ರ ಕಿನಾರೆಯಲ್ಲಿ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ವಿಶ್ರಾಂತಿ ಗೃಹಗಳ ನಿರ್ಮಾಣಕ್ಕೆ ಅನುಮತಿ ನೀಡಿದಂತಾಗಿದೆ. 

ಮತ್ತೂಂದು ಮಹತ್ವದ ನಿರ್ಣಯದಲ್ಲಿ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ವಿಧೇಯಕ 2018ಕ್ಕೆ ಅನುಮೋದನೆ ನೀಡಲಾಗಿದೆ. ಅದು ಸದ್ಯ ಇರುವ ಭಾರತೀಯ ವೈದ್ಯ ಪದ್ಧತಿಗಾಗಿನ ಕೇಂದ್ರ ಮಂಡಳಿ (ಸಿಸಿಐಎಂ) ಸ್ಥಾನದಲ್ಲಿ ಹೊಸ ಆಯೋಗ ರಚನೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next