Advertisement

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

07:24 PM Dec 04, 2021 | Team Udayavani |

ವಾಷಿಂಗ್ಟನ್‌: ಭಾರತದಿಂದ ಅಕ್ರಮವಾಗಿ ಅಮೆರಿಕಕ್ಕೆ ತೆರಳಿರುವ ಆರೋಪದಲ್ಲಿ ಮೂವರು ಭಾರತೀಯರನ್ನು ಅಮೆರಿಕದ ವರ್ಜಿನ್‌ ದ್ವೀಪದಲ್ಲಿ ಬಂಧಿಸಲಾಗಿದೆ.

Advertisement

ಈ ಮೂವರು ಈ ಹಿಂದೆಯೂ ಒಮ್ಮೆ ಇದೇ ಆರೋಪದಲ್ಲಿ ಸಿಲುಕಿದ್ದು, ಗಡಿಪಾರಾಗಿದ್ದಾಗಿ ವರದಿಯಾಗಿದೆ. ಕೃಷ್ಣಬೆನ್‌ ಪಟೇಲ್‌(25), ನಿಕುಂಜ್‌ ಕುಮಾರ್‌ ಪಟೇಲ್‌(27) ಮತ್ತು ಅಶೋಕ್‌ ಕುಮಾರ್‌ ಪಟೇಲ್‌(39) ಬಂಧಿತರು.

ಅವರು ವರ್ಜಿನ್‌ ದ್ವೀಪದಿಂದ ಫೋರ್ಟ್‌ ಲಾಡರ್‌ಡೇಲ್‌ಗೆ ವಿಮಾನ ಪ್ರಯಾಣ ಮಾಡಲು ಹೊರಟಿದ್ದಾಗ ಸಿಕ್ಕಿಬಿದ್ದಿದ್ದಾರೆ. ನ.24ರಂದು ಬಂಧಿತರಾಗಿರುವ ಅವರನ್ನು ಡಿ.2ರಂದು ನ್ಯಾಯಾಲಯದ ಮುಂದೆ ಪ್ರಾರ್ಥಮಿಕ ವಿಚಾರಣೆಗೆ ಹಾಜರುಪಡಿಸಲಾಗಿದೆ. ಆರೋಪ ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲುಶಿಕ್ಷೆಯಾಗಲಿದೆ ಎನ್ನಲಾಗಿದೆ.

ಈ ಮೂವರನ್ನು ಅಕ್ರಮವಾಗಿ ಒಳನುಸುಳುವಿಕೆ ಆರೋಪದಲ್ಲಿ 2014ರಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next