Advertisement

Airport Security ಕರ್ತವ್ಯದಲ್ಲಿದ್ದ 3 ಶ್ವಾನಗಳಿಗೆ ಸೇವೆಯಿಂದ ನಿವೃತ್ತಿ

05:42 PM Aug 26, 2023 | Team Udayavani |

ಪಣಜಿ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‍ನ (CISF) ಏರ್ ಪೋರ್ಟ್ ಸೆಕ್ಯುರಿಟಿ ಗ್ರೂಪ್‍ನ ಬಾಂಬ್ ಪತ್ತೆ ದಳದಲ್ಲಿ ಕರ್ತವ್ಯದಲ್ಲಿದ್ದ 3 ಶ್ವಾನಗಳನ್ನು  ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ. ಸುಮಾರು 10 ವರ್ಷಗಳ ಸೇವೆಯ ನಂತರ, ತಕ್ಷಕ್, ಶೆರೋ, ಟೈಗರ್ ಎಂಬ ಮೂರು ನಾಯಿಗಳು ನಿವೃತ್ತವಾಗಿವೆ.

Advertisement

ದಾಬೋಲಿ ವಿಮಾನ ನಿಲ್ದಾಣದಲ್ಲಿ ಮೂರೂ ಶ್ವಾನಗಳಿಗೆ ಸಿಎಸ್‍ಐಎಫ್ ದಳದ ವತಿಯಿಂದ ಬೀಳ್ಕೊಡಲಾಯಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೂರು ನಾಯಿಗಳಿಗೆ ಹಾರ ಹಾಕಿ ಗೌರವಿಸಿದರು. ಇದಲ್ಲದೇ ಎಲ್ಲಾ ಮೂರು ನಾಯಿಗಳಿಗೂ ಪದಕಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಸಿಐಎಸ್‍ಎಫ್ ಯೋಧರೊಂದಿಗೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಮೂರು ನಾಯಿಗಳು ಪ್ರಯಾಣಿಕರ ಸುರಕ್ಷಿತ ವಿಮಾನ ಪ್ರಯಾಣಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಈ  ಸನ್ಮಾನ ಸಮಾರಂಭದಲ್ಲಿ ಮೂರು ನಾಯಿಗಳನ್ನು ದತ್ತು ಪಡೆಯಲು ಆಸಕ್ತಿ ತೋರಿದ ಸಾಕುಪ್ರಾಣಿ ಪ್ರಿಯರಿಗೆ ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next