Advertisement

Tragedy: ಜಾತ್ರೆಯಲ್ಲಿ ನೆರೆದಿದ್ದವರ ಮೇಲೆ ಹರಿದ ಟ್ಯಾಂಕರ್, 3ಮೃತ್ಯು, 20ಕ್ಕೂ ಹೆಚ್ಚು ಗಾಯ

08:46 AM Feb 11, 2024 | Team Udayavani |

ಸಿಕ್ಕಿಂ: ವೀಕೆಂಡ್ ನಲ್ಲಿ ನಡೆಯುತ್ತಿದ್ದ ಮೇಳದಲ್ಲಿ ಭಾಗವಹಿಸಿದ್ದ ಜನರ ಮೇಲೆ ಹಾಲಿನ ಟ್ಯಾಂಕರೊಂದು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು ಸುಮಾರು 20 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಸಿಕ್ಕಿಂನ ರಾಣಿಪೂಲ್‌ನಲ್ಲಿ ಸಂಭವಿಸಿದೆ.

Advertisement

ರಾಣಿಪೂಲ್‌ನಲ್ಲಿ ಮೇಳ ನಡೆಯುತಿತ್ತು ಇದರಲ್ಲಿ ನೂರಾರು ಮಂದಿ ಭಾಗವಹಿಸಿದ್ದರು ಈ ವೇಳೆ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ಎರಡು ಕಾರು ಬೈಕು ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮೇಳದಲ್ಲಿ ನೆರೆದಿದ್ದ ಜನರ ಮೇಲೆ ಹರಿದಿದೆ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರೆ ಇಪ್ಪತ್ತೂ ಜನರಿಗೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ಭೀಕರ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ, ಡಿಕ್ಕಿಯ ರಭಸಕ್ಕೆ ಕಾರುಗಳು ಜಾತ್ರೆಯಲ್ಲಿ ನೆರೆದಿದ್ದ ಜನರತ್ತ ತಳ್ಳಲ್ಪಟ್ಟು ನಿಯಂತ್ರಣ ತಪ್ಪಿದ ಟ್ಯಾಂಕರ್ ಅಲ್ಲಿದ್ದ ಜನರ ಮೇಲೆ ಹರಿದಿರುವುದು ಕಾಣಬಹುದು.

ಪ್ರಾಥಮಿಕ ತನಿಖೆಯ ಪ್ರಕಾರ ಹಾಲಿನ ಟ್ಯಾಂಕರ್ ಬ್ರೇಕ್ ವಿಫಲವಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು. ಗಾಯಾಳುಗಳನ್ನು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಪಘಾತದ ವೇಳೆ ಮೇಳದ ಮೈದಾನದಲ್ಲಿ ‘ತಾಂಬೋಲ’ ಆಟ ನಡೆಯುತ್ತಿದ್ದರಿಂದ ಜನರಿಂದ ತುಂಬಿ ತುಳುಕುತ್ತಿತ್ತು ಇದರಿಂದ ಹೆಚ್ಚಿನ ಜನ ಸೇರಿದ್ದರು ಎನ್ನಲಾಗಿದೆ.

Advertisement

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next