Advertisement

ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಪ್ರತಿನಿಧಿ ಸಭೆ ಸಮಾವೇಶ ಆರಂಭ

06:47 AM Mar 08, 2019 | Team Udayavani |

ಗ್ವಾಲಿಯರ್‌ : ರಾಷ್ಟ್ರೀಯ  ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅತ್ಯುನ್ನತ ನೀತಿ ನಿರ್ಧಾರ ರೂಪಿಸುವ ‘ಅಖೀಲ ಭಾರತೀಯ ಪ್ರತಿನಿಧಿ ಸಭೆ’ ಯ ಮೂರು ದಿನಗಳ ವಾರ್ಷಿಕ ಸಭೆ ಇಂದಿಲ್ಲಿ ಆರಂಭಗೊಂಡಿತು. 

Advertisement

43 ಸಂಘ ಪ್ರಾಂತ್ಯಗಳು ಮತ್ತು 11 ಪ್ರಾದೇಶಿಕ ವಿಭಾಗಗಳ ಸುಮಾರು 1,400 ಆಯ್ದ ಪ್ರತಿನಿಧಿಗಳು ಭಾಗವಹಿಸುತ್ತಿರುವ ಈ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪಾಲ್ಗೊಳ್ಳುತ್ತಾರೆ. 

ಮೂರು ದಿನಗಳ ಈ ಸಮಾವೇಶದಲ್ಲಿ  ಶಿಕ್ಷಣ ರಂಗವೂ ಸೇರಿದಂತೆ ಆರ್‌ಎಸ್‌ಎಸ್‌ ವಿವಿಧ ಕ್ಷೇತ್ರಗಳಲ್ಲಿ ಕೈಗೊಳ್ಳುವ ವರ್ಷ ಪೂರ್ತಿ ಕಾರ್ಯಕ್ರಮಗಳ ರೂಪರೇಖೆಯನ್ನು ನಿರ್ಧರಿಸಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next