Advertisement

3.5 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

09:37 PM Jun 03, 2021 | Team Udayavani |

ಹುಮನಾಬಾದ: ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ ದರ ಗಗನಕ್ಕೆ ಮುಟ್ಟಿದ್ದು, ಮೋದಿ ಮೋದಿ ಎನ್ನುವ ಯುವಕರು ಸರ್ಕಾರದ ಆಡಳಿತದ ಬಗ್ಗೆ ಪ್ರಶ್ನಿಸಬೇಕು. ಕಾಂಗ್ರೆಸ್‌ ಆಡಳಿತ ಅವಧಿ  ಹಾಗೂ ಇಂದಿನ ಸರ್ಕಾರದ ಆಡಳಿತ ಕುರಿತು ತಿಳಿದುಕೊಳ್ಳಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಘೋಡವಾಡಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 3.5 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಆಡಳಿತ ಅವಧಿ ಯಲ್ಲಿ ಬಡವರ ಪರ ಯೋಜನೆಗಳು ಹಾಗೂ ಜನರಿಗೆ ಭಾರವಾಗದಂತೆ ಸರ್ಕಾರದ ಕಾರ್ಯಕ್ರಮ ನಡೆಯುತ್ತಿದ್ದವು. ಘೋಡವಾಡಿ ಗ್ರಾಮ ಧಾರ್ಮಿಕ ಕ್ಷೇತ್ರವಾಗಿದ್ದು, ಮೂರು ರಾಜ್ಯಗಳ ಲಕ್ಷಾಂತರ ಜನರು ಇಲ್ಲಿಗೆ ಪ್ರತಿ ವರ್ಷ ಭೇಟಿ ನೀಡಿ ಇಸೆ¾„ಲ್‌ ಖಾದರಿ ಗರ್ದಾ ದರ್ಶನ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕೆರೆ ಮಹತ್ವ ಹೆಚ್ಚಿದ್ದು, ಕೆರೆ ಅಭಿವೃದ್ಧಿ ಕಾರ್ಯಕ್ಕೆ ಇದೀಗ ಚಾಲನೆ ನೀಡಲಾಗಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನಡೆಯುತ್ತಿದ್ದ ಕೋವಿಡ್‌ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಕಡ್ಡಾಯವಾಗಿ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ದೇಶದಲ್ಲಿ 20 ಕೋಟಿಗೂ ಅಧಿ ಕ ಜನರು ಲಸಿಕೆ ಪಡೆದಿದ್ದಾರೆ. ಯಾವುದೇ ಹೆದರಿಕೆ ಇಲ್ಲದೆ ಲಸಿಕೆ ಪಡೆಯುವಂತೆ ತಿಳಿಸಿದರು. ಈ ವೇಳೆ ಜಿಪಂ ಸದಸ್ಯ ಲಕ್ಷ್ಮಣರಾವ್‌ ಬುಳ್ಳಾ, ಡಾ| ಪ್ರಕಾಶ ಪಾಟೀಲ, ಗ್ರಾಪಂ ಅಧ್ಯಕ್ಷ ದತ್ತು ಕಾಳೆ, ನ್ಯಾಯವಾದಿ ಖಲೀಲ್‌ ಸಾಬ್‌, ತಹಶೀಲ್ದಾರ್‌ ನಾಗಯ್ನಾ ಹಿರೇಮಠ, ಡಾ| ಗೋವಿಂದ್‌, ಪಿಆರ್‌ಇ ಎಇಇ ಹುಮನಾಬಾದ: ಘೋಡವಾಡಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜಶೇಖರ ಪಾಟೀಲ ಬುಧವಾರ ಚಾಲನೆ ನೀಡಿದರು. ವಾಮನರಾವ್‌ ಜಾಧವ ಇತರರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next