ಟೆಕ್ಸಾಸ್: ಎರಡನೇ ವಿಶ್ವಯುದ್ದ ಕಾಲದ ಸ್ಮರಣಾರ್ಥ ಡಲ್ಲಾಸ್ನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಶನಿವಾರ ಎರಡು ವಿಮಾನಗಳು ಡಿಕ್ಕಿ ಹೊಡೆದು, ಸಿಬ್ಬಂದಿ ಸೇರಿ ಆರು ಮಂದಿ ಮೃತಪಟ್ಟಿರುವ ಬಗ್ಗೆ ವರದಿ ತಿಳಿಸಿದೆ.
ಎರಡನೇ ಮಹಾಯುದ್ಧದ ಕಾಲದ ಎರಡು ಯುದ್ದ ವಿಮಾನಗಳಾದ ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್ಕೋಬ್ರಾ ಫೈಟರ್ ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್ಪೋರ್ಟ್ನಲ್ಲಿ ನಡೆದ ಏರ್ಶೋನಲ್ಲಿ ಭಾಗಿಯಾಗಿದ್ದು, ಈ ಸಮಯದಲ್ಲಿ ಪ್ರದರ್ಶನದ ವೇಳೆ ಸುಮಾರು ಮಧ್ಯಾಹ್ನ 1:20 ಕ್ಕೆ ಎರಡು ಯುದ್ದ ವಿಮಾನಗಳ ವಿಂಗ್ಸ್ ತಗುಲಿ ಅಪಘಾತವಾಯಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
ಘಟನೆಯ ಬಳಿಕ ತುರ್ತು ಘಟಕ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳೊಬ್ಬರು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.