Advertisement

2ನೇ ಟಿ20: ಭಾರತದ ವಿರುದ್ಧ ಆಫ್ರಿಕಾಗೆ 6 ವಿಕೆಟ್‌ ಜಯ

08:35 AM Feb 22, 2018 | |

ಸೆಂಚುರಿಯನ್‌: ದಕ್ಷಿಣ ಆಫ್ರಿಕಾದಲ್ಲಿ ಬುಧವಾರವೇ ಟಿ20 ಟ್ರೋಫಿ ಗೆಲ್ಲುವ ಭಾರತದ ಕನಸಿಗೆ ಕಲ್ಲು ಬಿದ್ದಿದೆ. ಸ್ವಲ್ಪ ಯತ್ನಿಸಿದ್ದರೆ, ಬೌಲಿಂಗ್‌ನಲ್ಲಿ ಇನ್ನಷ್ಟು ಬಿಗಿ ಸಾಧಿಸಿದ್ದರೆ ಅಂತಿಮ ಪಂದ್ಯಕ್ಕೂ ಮುನ್ನ ಭಾರತ ನಿರಾಳವಾಗಿರಬಹುದಿತ್ತು. ಬಹುಶಃ ನಿರಂತರ ಗೆಲುವಿನ ವಿಶ್ವಾಸದಿಂದಲೋ ಏನೋ ಭಾರತ ಸ್ವಲ್ಪ ಲೆಕ್ಕಾಚಾರ ಸಡಿಲಿಸಿದ್ದರಿಂದ ಅತ್ಯುತ್ತಮ ಹೋರಾಟದ ಹೊರತಾಗಿಯೂ ಸೋಲನ್ನು ಆಹ್ವಾನಿಸಿಕೊಂಡಿದೆ.

Advertisement

ಸೋಲಿಗೆ ಭಾರತದ ಬೌಲಿಂಗ್‌ ಪಡೆಯತ್ತಲೇ ಬೆಟ್ಟು ಮಾಡಬೇಕಾಗುತ್ತದೆ. ಪ್ರಮುಖ ಬೌಲರ್‌ಗಳಾದ ವೇಗಿ ಜಸಿøàತ್‌ ಬುಮ್ರಾ ಮತ್ತು ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ರನ್ನು ಹೊರಗಿಟ್ಟ ನಿರ್ಧಾರ ದುಬಾರಿಯಾಗಿ ಪರಿಣಮಿಸಿತು. 2ನೇ ಪಂದ್ಯದಲ್ಲಿ ಈ ಬೌಲರ್‌ಗಳನ್ನು ಆಡಿಸಿದ್ದರೆ ಗೆಲುವು ಕಷ್ಟವಿರಲಿಲ್ಲ. ಆಗ 3ನೇ ಪಂದ್ಯಕ್ಕೆ ಪ್ರಯೋಗಗಳನ್ನು ಮಾಡಿದ್ದರೆ ಒತ್ತಡಕ್ಕೆ ಸಿಕ್ಕುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಿಗದಿತ 20 ಓವರ್‌ ಗಳು ಮುಗಿದಾಗ 4 ವಿಕೆಟ್‌ ಕಳೆದುಕೊಂಡು ಹೋರಾಟಕಾರಿ 188 ರನ್‌ ಪೇರಿಸಿತು. 189 ರನ್‌ ಗಳಿಸುವ ಗುರಿ ಹೊತ್ತ ದ.ಆಫ್ರಿಕಾ 18.2 ಓವರ್‌ಗಳಲ್ಲಿ ಸರಿಯಾಗಿ 4 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿತು. ಇನ್ನೂ 8 ಎಸೆತಗಳು ಬಾಕಿಯಿರುವಂತೆಯೇ ಆಫ್ರಿಕಾ ಗುರಿ ಮುಟ್ಟಿದ್ದು ಭಾರತದ ಬೌಲಿಂಗ್‌ ಕುಸಿತಕ್ಕೆ ಸಾಕ್ಷಿ.

ಗುರಿ ಬೆನ್ನತ್ತುವಾಗ ಆಫ್ರಿಕಾ 38 ರನ್‌ಗಳಾಗುವಾಗ 2 ವಿಕೆಟ್‌ ಕಳೆದುಕೊಂಡಿತ್ತು. ಆಗ ಭಾರತದ ಅಭಿಮಾನಿಗಳು ಗೆಲುವಿನ ಕನಸು ಕಂಡಿದ್ದರು. ಇಲ್ಲಿಂದ ಮುಂದೆ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಲ್ಲೂ ನಾಯಕ ಜಾನ್‌ ಪಿ ಡುಮಿನಿ ಮತ್ತು ಹೊಸ ಆಟಗಾರ ಹೆನ್ರಿಚ್‌ ಕ್ಲಾಸೆನ್‌ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅಬ್ಬರದ ಆಟವಾಡಿದ ಕ್ಲಾಸೆನ್‌ 30 ಎಸೆತಗಳಲ್ಲಿ 7 ಸಿಕ್ಸರ್‌, 3 ಬೌಂಡರಿ ಸಹಿತ 69 ರನ್‌ ಬಾರಿಸಿದರು. ಇದೇ ಎರಡೂ ತಂಡಗಳ ಜಯದಲ್ಲಿ ನಿರ್ಣಾಯಕವೆನಿಸಿತು. ಕ್ಲಾಸೆನ್‌ ಔಟಾದ ನಂತರ ಡುಮಿನಿ ಹೋರಾಟವನ್ನು ಮುಂದುವರಿಸಿ 40 ಎಸೆತಗಳಲ್ಲಿ ಅಜೇಯ 64 ರನ್‌ ಗಳಿಸಿದರು. ಈ ಇಬ್ಬರು 3ನೇ ವಿಕೆಟ್‌ಗೆ 93 ರನ್‌ ಒಗ್ಗೂಡಿಸಿ ಪಂದ್ಯವನ್ನು ಭಾರತದಿಂದ ದೂರ ಒಯ್ದರು.

ಧೋನಿ, ಮನೀಶ್‌ ಸ್ಫೋಟ

Advertisement

 ಇದಕ್ಕೂ ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ಆರಂಭದಲ್ಲಿ 6 ಓವರ್‌ 45 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಧವನ್‌ 24 ರನ್‌ ಗಳಿಸಿದ್ದು ಈ ಮೂರು ವಿಕೆಟ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ರನ್‌. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಡಾಲ ಎಸೆತದಲ್ಲಿ ರೋಹಿತ್‌ ಎಲ್‌ಬಿ ಆದರು.ನಂತರ ಬಂದ ಸುರೇಶ್‌ ರೈನಾ (31 ರನ್‌) ಸಿಡಿಯುವ ಸೂಚನೆ ನೀಡಿದರು. ಧವನ್‌ ಜತೆಗೆ 44 ರನ್‌ ಜತೆಯಾಟ ನಿರ್ವಹಿಸಿದರು. ಆ ಬಳಿಕ ಡುಮಿನಿ ಎಸೆತದಲ್ಲಿ ಧವನ್‌ ಔಟಾದರು. ಈ ಬೆನ್ನಲ್ಲೇ ವಿರಾಟ್‌ ಕೊಹ್ಲಿ (1 ರನ್‌) ವಿಕೆಟ್‌ ಕಳೆದುಕೊಂಡರು. ಆಗ ತಂಡದ ಮೊತ್ತ 45 ರನ್‌ಗೆ 3 ವಿಕೆಟ್‌ ಆಗಿತ್ತು. ಈ ಹಂತದಲ್ಲಿ ಮನೀಶ್‌ ಪಾಂಡೆ- ಸುರೇಶ್‌ ರೈನಾ 4ನೇ ವಿಕೆಟ್‌ಗೆ 45 ರನ್‌ ಜತೆಯಾಟ ನೀಡಿದರು. ತಂಡದ ಮೊತ್ತ 90 ರನ್‌ ಆಗಿದ್ದಾಗ ಫೆಹ್ಲುಕ್ವಾಯೊ ಎಸೆತದಲ್ಲಿ ಎಲ್‌ಬಿ ಆಗುವುದರೊಂದಿಗೆ ರೈನಾ ಆಟಕ್ಕೆ ಬ್ರೇಕ್‌ ಬಿತ್ತು.

ಅಂತಿಮ ಓವರ್‌ ಬ್ಯಾಟಿಂಗ್‌ ಸ್ಫೋಟ

 5ನೇ ವಿಕೆಟ್‌ಗೆ ಒಂದಾದ ಕರ್ನಾಟಕ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ (ಅಜೇಯ 79 ರನ್‌) ಮತ್ತು ಎಂ.ಎಸ್‌.ಧೋನಿ (ಅಜೇಯ 52 ರನ್‌) 56 ಎಸೆತದಲ್ಲಿ 98 ರನ್‌ ಚಚ್ಚಿದರು. 48 ಎಸೆತ ಎದುರಿಸಿದ ಮನೀಶ್‌ ಪಾಂಡೆ 6 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು. 28 ಎಸೆತದ ಎದುರಿಸಿದ ಧೋನಿ 4 ಸಿಕ್ಸರ್‌, 3 ಬೌಂಡರಿ ಸಿಡಿಸಿ ತಂಡದ ಮೊತ್ತವನ್ನು 180 ರನ್‌ಗಳ ಗಡಿ ದಾಟಿಸಲು ನೆರವಾದರು. ಇವರಿಬ್ಬರು ಸೇರಿಕೊಂಡು ಅಕ್ಷರಶಃ ಕೊನೆ ತನಕ ಆಫ್ರಿಕಾ ಬೌಲರ್‌ಗಳನ್ನು ಕಾಡಿದರು. ಆಫ್ರಿಕಾ ಪರ ಡಾಲ 28ಕ್ಕೆ 2 ವಿಕೆಟ್‌ ಪಡೆದದ್ದು ವೈಯಕ್ತಿಕ ಶ್ರೇಷ್ಠ ಬೌಲಿಂಗ್‌ ಆಗಿತ್ತು. 

ಪಂದ್ಯದ ತಿರುವು
ಭಾರತದ 189 ರನ್‌ ಗುರಿ ಬೆನ್ನತ್ತಿ ಹೊರಟ ಆಫ್ರಿಕಾ ಪರ ಡುಮಿನಿ ಮತ್ತು ಕ್ಲಾಸೆನ್‌ 3ನೇ ವಿಕೆಟ್‌ಗೆ 93 ರನ್‌ ಜೊತೆಯಾಟವಾಡಿದರು. ಇದು ಪಂದ್ಯದ ಚಿತ್ರಣವನ್ನು ಬದಲಾಯಿಸಿತು.

ಸ್ಕೋರ್‌ ಪಟ್ಟಿ 

ಭಾರತ 20 ಓವರ್‌ಗೆ 188/4
 ಶಿಖರ್‌ ಧವನ್‌ ಸಿ ಬೆಹಡೀìನ್‌ ಬಿ ಡುಮಿನಿ 24
ರೋಹಿತ್‌ ಶರ್ಮ ಎಲ್‌ಬಿ ಡಾಲ 0
ಸುರೇಶ್‌ ರೈನಾ ಎಲ್‌ಬಿ ಫೆಹ್ಲುಕ್ವಾಯೊ 31
 ವಿರಾಟ್‌ ಕೊಹ್ಲಿ ಸಿ ಕ್ಲಾಸೆನ್‌ ಬಿ ಡಾಲ 1
ಮನೀಶ್‌ ಪಾಂಡೆ ಅಜೇಯ 79
 ಎಂ.ಎಸ್‌.ಧೋನಿ ಅಜೇಯ 52
ಇತರೆ: 1
ವಿಕೆಟ್‌ ಪತನ: 1-0, 2-44, 3-45, 4 -90

ಬೌಲಿಂಗ್‌
ಕ್ರಿಸ್‌ ಮಾರಿಸ್‌ 4 1 42 0
ಜೂನಿಯರ್‌ ಡಾಲ 4 1 28 2
 ಡೇನ್‌ ಪ್ಯಾಟರ್ಸನ್‌ 4 0 51 0
ಡುಮಿನಿ 2 0 13 1
ತಬ್ರೆಜ್‌ ಶಂಸಿ 2 0 24 0
ಫೆಹ್ಲುಕ್ವಾಯೊ 2 0 15 1
 ಜಾನ್‌ ಸ್ಮಟ್ಸ್‌ 2 0 15 0

ದ.ಆಫ್ರಿಕಾ 18.4 ಓವರ್‌ಗೆ 189/4 

ಹೆಂಡ್ರಿಕ್ಸ್‌ ಸಿ ಪಾಂಡ್ಯ ಬಿ ಠಾಕೂರ್‌ 26
ಜಾನ್‌ ಸ್ಮಟ್ಸ್‌ ಸಿ ರೈನಾ ಬಿ ಉನಾಡ್ಕತ್‌ 2
 ಜೆ.ಪಿ.ಡುಮಿನಿ ಅಜೇಯ 64
 ಹೆನ್ರಿಕ್ಸ್‌ ಕ್ಲಾಸೆನ್‌ ಸಿ ಧೋನಿ ಬಿ ಉನಾಡ್ಕತ್‌ 69
ಡೇವಿಡ್‌ ಮಿಲ್ಲರ್‌ ಸಿ ಠಾಕೂರ್‌ ಬಿ ಪಾಂಡ್ಯ 5
ಬೆಹಡೀìನ್‌ ಅಜೇಯ 16
 ಇತರೆ: 7
 ವಿಕೆಟ್‌ ಪತನ: 1-24, 2-38, 3-131, 4-141

ಬೌಲಿಂಗ್‌:
ಭುವನೇಶ್ವರ್‌ 3 0 19 0
 ಶಾದೂìಲ್‌ 4 0 31 1
 ಉನಾಡ್ಕತ್‌ 3.4 0 42 2
ಹಾರ್ದಿಕ್‌ ಪಾಂಡ್ಯ 4 0 31 1
ಚಹಲ್‌ 4 0 64 0

Advertisement

Udayavani is now on Telegram. Click here to join our channel and stay updated with the latest news.

Next