Advertisement
ಮತದಾರರನ್ನು ಮತಗಟ್ಟೆ ಕೇಂದ್ರಗಳತ್ತ ಆಕರ್ಷಿಸಲು ವಿಶಿಷ್ಟ ಯೋಜನೆಯನ್ನು ಹಮ್ಮಿಕೊಂಡಿರುವ ಆಯಾ ಜಿಲ್ಲಾಡಳಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಸಂಸ್ಕೃತಿ, ಆಚರಣೆ, ಇತಿಹಾಸಗಳನ್ನು ಬಿಂಬಿಸುವ ಪ್ರಯತ್ನವನ್ನೂ ಮಾಡಿಕೊಂಡಿವೆ.
Related Articles
Advertisement
ಕುಂದಾಪುರ: ಕುಂದಾಪುರದ ಕಿರಿಮಂಜೇಶ್ವರ, ದೇವಲ್ಕುಂದ, ಅಮಾಸೆಬೈಲು, ನೇರಳಕಟ್ಟೆ, ಕರ್ಕುಂಜೆ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು,
ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮೊದಲ ಮತವನ್ನು ಚಲಾಯಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ವೀಕ್ಷಣೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಣಕು ಮತದಾನ ಪ್ರಕ್ರಿಯೆ ನಂತರ ಮತದಾನ ಎಲ್ಲಾ ಕಡೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ಗಂಗಾವತಿ: ತಾಲೂಕಿನ ಆನೆಗುಂದಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಆನೆಗೊಂದಿ ರಾಜವಂಶಸ್ಥರಾದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ತಮ್ಮ ಆಪ್ತರ ಜತೆ ತೆರಳಿ ಮತ ಚಲಾಯಿಸಿದರು..
ಮತಯಂತ್ರದಲ್ಲಿ ದೋಷ, ಆರಂಭವಾಗದ ಮತದಾನ:ವಿಜಯಪುರ : ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭಾ ಚುನಾವಣೆಗೆ ಮತ ಯಂತ್ರದ ತಾಂತ್ರಿಕ ದೋಷದಿಂದ ನಗರದ ಮತಗಟ್ಟೆಯೊಂದರಲ್ಲಿ ಇನ್ನು ಆರಂಭವಾಗಿಲ್ಲ. ಇದೆ ರೀತಿ ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ಕಂಡುಬಂದ ದೋಷದಿಂದಾದಿ ಮತದಾರರು ಮತಗಟ್ಟೆಯಲ್ಲಿ ಕಾದುಕುಳಿತ ಪ್ರಸಂಗ ನಡೆಯಿತು. ಇದನ್ನೂ ಓದಿ: Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ