Advertisement

2ನೇ ಹಂತದ ಪಲ್ಸ್‌ ಪೋಲಿಯೋ ಯಶಸ್ವಿ

12:40 PM Mar 12, 2018 | |

ಮೈಸೂರು: ಮೈಸೂರು ಜಿಲ್ಲೆಯಾದ್ಯಂತ ಎರಡನೇ ಹಂತದ ಪಲ್ಸ್‌ ಪೋಲಿಯೊ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ.94.68 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲೆಯ 2,63,480 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಉದ್ದೇಶ ಹೊಂದಲಾಗಿತ್ತು, ಆದರೆ 2,49,469 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

Advertisement

ಮೈಸೂರು ತಾಲೂಕಿನಲ್ಲಿ ಶೇ.93.53, ಟಿ.ನರಸೀಪುರ ತಾಲೂಕಿನಲ್ಲಿ ಶೇ.94.39, ನಂಜನಗೂಡು ತಾಲೂಕಿನಲ್ಲಿ ಶೇ.97.19, ಎಚ್‌.ಡಿ. ಕೋಟೆ ತಾಲೂಕಿನಲ್ಲಿ ಶೇ.89.52, ಹುಣಸೂರು ತಾಲೂಕಿನಲ್ಲಿ ಶೇ.98.50, ಪಿರಿಯಾಪಟ್ಟಣ-ಶೇ.96.51 ಹಾಗೂ ಕೆ.ಆರ್‌. ನಗರದಲ್ಲಿ ಶೇ.97.89 ಲಸಿಕೆ ಹಾಕಲಾಗಿದೆ. ಪಲ್ಸ್‌ ಪೋಲಿಯೋ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1,588 ಕೇಂದ್ರಗಳನ್ನು ತೆರೆಯಲಾಗಿತ್ತು.

ಇದಲ್ಲದೆ ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಸಹ ಲಸಿಕೆ ಹಾಕಲಾಯಿತು. ಪೋಲಿಯೋ ಲಸಿಕೆ ಹಾಕುವ ಕಾರ್ಯದಲ್ಲಿ ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ನರ್ಸಿಂಗ್‌ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 6,352 ಮಂದಿ ಲಸಿಕೆ ಹಾಕಿದರು. ಇವರೊಂದಿಗೆ 320 ಮೇಲ್ವಿಚಾರಕರು ಕಾರ್ಯನಿರ್ವಹಿಸಿದರು.

ಲಸಿಕಾ ಕೇಂದ್ರಗಳಲ್ಲಿ ನಗರದ ರೈಲು ನಿಲ್ದಾಣ, ಗ್ರಾಮಾಂತರ ಮತ್ತು ನಗರ ಬಸ್‌ ನಿಲ್ದಾಣ, ಮೃಗಾಲಯ, ಅರಮನೆ, ಚಾಮುಂಡಿಬೆಟ್ಟ ಇನ್ನಿತರ ಪ್ರವಾಸಿ ಕೇಂದ್ರಗಳಲ್ಲಿ ಪಲ್ಸ್‌ ಪೋಲಿಯೋ ಲಸಿಕೆ ಹಾಕಲಾಯಿತು. ಪಲ್ಸ್‌ ಪೋಲಿಯೋಗಾಗಿ ಜಿಲ್ಲೆಯಲ್ಲಿ ಒಟ್ಟು 20 ಸಂಚಾರ ಕೇಂದ್ರಗಳ ಮೂಲಕ ಲಸಿಕೆ ಹಾಕಲಾಗಿದೆ. ಮಾ.12 ರಿಂದ 14ರವರೆಗೆ ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next