Advertisement

ಎರಡನೇ ದಿನವೂ ಕುಗ್ಗದ ಉತ್ಸಾಹ

03:29 PM Jan 03, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಶಾಲೆ ಪುನಾರಂಭಗೊಂಡ ಎರಡನೇ ದಿನವೂ ವಿದ್ಯಾರ್ಥಿಗಳು ಉತ್ಸಾಹದಿಂದಶಾಲೆಗೆ ಆಗಮಿಸಿದ್ದು, ಹಾಜರಾತಿ ಸಂಖ್ಯೆಯಲ್ಲಿಹೆಚ್ಚಳ ಕಂಡುಬಂದಿದೆ. ಶಿಗ್ಗಾವಿ ತಾಲೂಕಿನ ಅಂದಲಗಿ ಸರ್ಕಾರಿ ಶಾಲೆ ಶಿಕ್ಷಕರೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರುಶಾಲೆ ಆರಂಭದ ಮೊದಲ ದಿನವಾದ ಶುಕ್ರವಾರ ಶಾಲೆಗೆ ಹಾಜರಾಗದಿದ್ದರಿಂದ ಇನ್ನುಳಿದ ಶಿಕ್ಷ‌ಕರು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

Advertisement

ಶಿಗ್ಗಾವಿ ತಾಲೂಕು ಅಂದಲಗಿ ಸರ್ಕಾರಿ ಶಾಲೆ ಶಿಕ್ಷ‌ಕರೊಬ್ಬರಿಗೆ ಶನಿವಾರ ಕೋವಿಡ್ ದೃಢಪಟ್ಟಿದೆ. ಆದರೆ, ಅವರಿಗೆ ಮೂರು ದಿನಗಳ ಹಿಂದೆಯೇ ಜ್ವರ ಕಾಣಿಸಿಕೊಂಡಿದ್ದರಿಂದ ಅವರು ಶಾಲೆ ಪುನಾರಂಭಗೊಂಡರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಸೋಂಕಿತ ಶಿಕ್ಷ‌ಕರ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಪತ್ನಿ ಕೂಡ ಶಿಕ್ಷ‌ಕಿಯಾಗಿದ್ದು, ಅವರು ಕ್ವಾರಂಟೈನ್‌ನಲ್ಲಿ ಇದ್ದಾರೆ. ಆದ್ದರಿಂದ ಆ ಶಾಲೆಯನ್ನು ಬಂದ್‌ ಮಾಡುವ ಸಂದರ್ಭ ಎದುರಾಗಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷ‌ಕ ಸಿಬ್ಬಂದಿ ಯಾವುದೇ ಆತಂಕವಿಲ್ಲದೆ ಎರಡನೇ ದಿನವೂ ಶಾಲೆಗೆ ಆಗಮಿಸಿದ್ದರು.

ಜಿಲ್ಲೆಯಲ್ಲಿ ಎರಡನೇ ದಿನ ಬಹುತೇಕಎಲ್ಲ ಶಾಲೆಗಳಲ್ಲಿ ಶೇ. 50ರಷ್ಟು ಹಾಜರಾತಿಕಂಡುಬಂದಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ತರಗತಿಗೆ ಆಗಮಿಸಿದ್ದರು. 6ರಿಂದ 9ನೆ ತರಗತಿವರೆಗಿನ ಮಕ್ಕಳು ವಿದ್ಯಾಗಮ ತರಗತಿಗೆ ಹಾಜರಾಗಿದ್ದರು. 146 ಪದವಿ ಪೂರ್ವ ಕಾಲೇಜುಗಳಿದ್ದು,ದ್ವಿತೀಯ ಪಿಯುಸಿಯಲ್ಲಿ 16,680 ವಿದ್ಯಾರ್ಥಿಗಳ ದಾಖಲಾತಿಯಿದೆ. ಈ ಪೈಕಿ ಶುಕ್ರವಾರ7,850 ವಿದ್ಯಾರ್ಥಿಗಳು ಹಾಜರಾಗಿದ್ದರು. 6ರಿಂದ 9ನೇ ತರಗತಿವರೆಗೆ 1.08 ಲಕ್ಷ ಮಕ್ಕಳ ದಾಖಲಾತಿಯಲ್ಲಿ, ಶುಕ್ರವಾರ 58,676 ವಿದ್ಯಾರ್ಥಿಗಳು ಹಾಜರಾಗಿದ್ದರು. ಅಂದರೆ ಶೇ.50ಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು.

ಅಗತ್ಯ ಮುಂಜಾಗ್ರತೆ: ಜಿಲ್ಲಾದ್ಯಂತ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಹಾಗೂಕೋವಿಡ್‌-19 ಮುನ್ನೆಚ್ಚರಿಕೆ ವಹಿಸಲಾಗಿತ್ತು.ಶಾಲಾ ಕೊಠಡಿಯೊಳಗೆ ಮಕ್ಕಳಿಗೆ ವಿದ್ಯಾಗಮ ಪಠ್ಯಬೋಧನೆ, ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಯಿತು.

ಮೊದಲ ದಿನದಂತೆಯೇ ಶನಿವಾರ ಕೂಡ ವಿದ್ಯಾರ್ಥಿಗಳು ಶಾಲೆಗಳಿಗೆ ಮೊದಲ ದಿನದಂತೆಯೇ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡು ಬಂದಿತು. ಜಿಲ್ಲೆಯಲ್ಲಿ ಶೇ. 50ಕ್ಕಿಂತಹೆಚ್ಚಿನ ಪ್ರಮಾಣದಲ್ಲಿ ಎರಡನೇ ದಿನ ಮಕ್ಕಳಹಾಜರಾತಿ ಇರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ತಿಳಿಸಿದರು.

Advertisement

ಹಾವೇರಿ ತಾಲೂಕಿನಲ್ಲಿ ಶೇ.55, ಹಾನಗಲ್ಲ ತಾಲೂಕಿನಲ್ಲಿ ಶೇ. 55, ಸವಣೂರ ತಾಲೂಕಿನಲ್ಲಿಶೇ. 53, ಬ್ಯಾಡಗಿ ಹಾಗೂ ರಾಣಿಬೆನ್ನೂರು ತಾಲೂಕಿನಲ್ಲಿ ಶೇ.50, ಹಿರೇಕೆರೂರ ತಾಲೂಕಿನಲ್ಲಿಶೇ.45 ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ಶೇ.40ರಷ್ಟು ಮಕ್ಕಳು ಶಾಲೆಗೆ ಆಗ ಮಿಸಿರುವುದಾಗಿ ತಿಳಿಸಿದ್ದಾರೆ.

ಪಾಲಕರ ಒಪ್ಪಿಗೆ ಪತ್ರದೊಂದಿಗೆ ವಿದ್ಯಾರ್ಥಿಗಳುಶಾಲೆಗೆ ಆಗಮಿಸುತ್ತಿದ್ದಾರೆ. ಬಹುದಿನಗಳ ನಂತರಶಾಲೆಯಲ್ಲಿ ಸ್ನೇಹಿತರು, ಶಿಕ್ಷಕರನ್ನು ಭೇಟಿ ಮಾಡಿದ ಸಂಭ್ರಮದಲ್ಲಿರುವ ದೃಶ್ಯ ಕಂಡುಬಂದಿತು.

ಜಿಲ್ಲೆಯ ಎಲ್ಲ ಶಾಲೆಗಳು ಆರಂಭವಾಗಿದ್ದು, ಎರಡನೇ ದಿನ ಮಕ್ಕಳ ಹಾಜರಾತಿಯಲ್ಲೂ ಏರಿಕೆಯಾಗಿದೆ. ಮಕ್ಕಳುಉತ್ಸಾಹದಿಂದಲೇ ಶಾಲೆಗೆ ಆಗಮಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಒಬ್ಬರು ಶಿ ಕ್ಷ‌ಕರಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದರೂ ಅವರು ಶಾಲೆಗೆಬರದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಅಂದಾನಪ್ಪ ವಡಗೇರಿ, ಡಿಡಿಪಿಐ ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next