ಗದಗ: ಇಲ್ಲಿನ ರಂಗನವಾಡಿ ಮಹಿಳೆಯೊಬ್ಬರಿಗೆ ಗುರುವಾರ ಮತ್ತೂಂದು ಕೋವಿಡ್ 19 ಸೋಂಕು ದೃಢ ಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡಕ್ಕೇರಿದೆ. ಗದಗ ನಗರದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಅವಳಿ ನಗರದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ಒಂದು ವಾರದ ಬಳಿಕ ನಗರದಲ್ಲಿ ಎರಡನೇ ಪ್ರಕರಣ ಪತ್ತೆಯಾಗಿದೆ. ಏ.7ರಂದು ಇಲ್ಲಿನ ರಂಗನವಾಡಿ ಓಣಿಯಲ್ಲಿ 82 ವರ್ಷದ ವೃದ್ಧೆಯಲ್ಲಿ (ಪಿ-166) ಪತ್ತೆಯಾಗಿತ್ತು. ಇದಾದ ನಂತರ ಸುಮಾರು ಅವಳಿ ನಗರ ಸೇರಿದಂತೆ ಯಾವುದೇ ಪ್ರಕರಣಗಳು ದೃಢಪಟ್ಟಿರಲಿಲ್ಲ. ಆದರೆ ಪಿ.166 ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 82 ಜನರನ್ನು ಕೋವಿಡ್ 19 ತಪಾಸಣೆ ನಡೆಸಿದರೂ ಎಲ್ಲ ವರದಿಗಳು ನಕಾರಾತ್ಮಕವಾಗಿ ಬಂದಿವೆ. ಆದರೆ ದ್ವಿತೀಯ ಸಂಪರ್ಕದಲ್ಲಿದ್ದ 59 ವರ್ಷ ಮಹಿಳೆಯಲ್ಲಿ (ಪಿ.304) ಗುರುವಾರ ಕೊರೊನಾ ಸೋಂಕು ಖಚಿತವಾಗಿದೆ.
ಗೆಳತಿಯಿಂದ ಸೋಂಕು: ಜಿಲ್ಲೆಯಲ್ಲಿ ಮೊದಲ ಕೋವಿಡ್ 19 ದೃಢಪಟ್ಟು, ಮೃತಪಟ್ಟಿರುವ ವೃದ್ಧೆ ಹಾಗೂ ಗುರುವಾರ ಸೋಂಕು ಖಚಿತವಾಗಿರುವ ಅಕ್ಕಪಕ್ಕದ ನಿವಾಸಿಗಳು ಕೆಲ ವರ್ಷಗಳಿಂದ ಒಂದೇ ಓಣಿಯಲ್ಲಿ ಜೀವನ ನಡೆಸುತ್ತಿದ್ದರಿಂದ ಸಂಬಂಧಿಕರಿಗಿಂತ ಹೆಚ್ಚು ಆತ್ಮೀಯತೆ ಬೆಳೆದಿತ್ತು. ಅಲ್ಲದೇ ಪಿ.166 ನಂತರ ನೆರೆ ಮನೆಯ 59 ವರ್ಷ ಮಹಿಳೆಗೆ ಸೋಂಕು ಕಂಡು ಬಂದಿದೆ. ಹೀಗಾಗಿ ವೃದ್ಧೆ ಯಿಂದಲೇ ಸೋಂಕು ಹರಡಿದೆ ಎನ್ನಲಾಗಿದೆ.
ಇಡೀ ರಂಗನವಾಡಿ ಖಾಲಿ: ಇಲ್ಲಿನ ರಂಗನವಾಡಿ ಓಣಿಯಲ್ಲೇ ಎರಡು ಕೋವಿಡ್ 19 ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಇಡೀ ಓಣಿಯಲ್ಲಿರುವ ಎಲ್ಲರನ್ನೂ ವೈದ್ಯಕೀಯ ತಪಾಸಣೆ ನಡೆಸಿ, ಕ್ವಾರಂಟೈನ್‌ನಲ್ಲಿಡಲು ಜಿಲ್ಲಾಡಳಿತ ನಿರ್ಧರಿಸಿದೆ.ಪಿ-166 ಪ್ರರಕಣ ದೃಢವಾಗುತ್ತಿದ್ದಂತೆ ರಂಗನವಾಡಿ ಹಾಗೂ ಎಸ್.ಎಂ. ಕೃಷ್ಣಾ ನಗರದಲ್ಲಿ ಆರೋಗ್ಯ ಇಲಾಖೆ ಸಮೀಕ್ಷೆಚುರುಕುಗೊಳಿಸಿತ್ತು.ಅದರಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ82 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ದ್ವಿತೀಯಸಂಪರ್ಕದಲ್ಲಿದ್ದವರ ತಪಾಸಣೆ ನಡೆಸುತ್ತಿದ್ದಾಗ ಈ ಪ್ರಕರಣಕಂಡು ಬಂದಿದೆ. ಇದರ ಬೆನ್ನಲ್ಲೇ ಬುಧವಾರ ತಡರಾತ್ರಿ ಪಿ.304 ಕುಟುಂಬಸ್ಥರನ್ನು ಆಸ್ಪತ್ರೆಗೆ ಸಾಗಿಸಿದ್ದು, ಐಸೋಲೇಷನ್‌ನಲ್ಲಿ ಇಡಲಾಗಿದೆ. ಪಿ.304 ಖಚಿತವಾಗುತ್ತಿದ್ದಂತೆ ಗುರುವಾರಮಧ್ಯಾಹ್ನ 1 ಗಂಟೆ ಸುಮಾರಿಗೆ ಮೂರು ಆಂಬ್ಯುಲನ್ಸ್‌ಗಳಲ್ಲಿ ರಂಗನವಾಡಿಗೆ ಧಾವಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಯನ್ನುಜಾಲಾಡಿದರು. ಮನೆಯಲ್ಲಿದ್ದವರನ್ನು ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.