Advertisement

ಕಂಕನಾಡಿ ರಸ್ತೆಗೆ 2 ಕೋ. ರೂ. ಅನುದಾನ: ಶಾಸಕ ಲೋಬೋ

01:48 PM Oct 21, 2017 | |

ಮಹಾನಗರ: ಕಂಕನಾಡಿ ರೈಲ್ವೇ ಸ್ಟೇಷನ್‌ ರಸ್ತೆಯನ್ನು ಅಗಲಗೊಳಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ 2 ಕೋಟಿ ರೂ. ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್‌. ಲೋಬೋ ತಿಳಿಸಿದರು. ಕಂಕನಾಡಿ ರೈಲ್ವೇ ಸ್ಟೇಷನ್‌ ರಸ್ತೆ ಅಗಲಗೊಳಿಸುವ ಕಾಮಗಾರಿಗೆ ಅವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ಪಂಪ್‌ವೆಲ್‌ ಪಡೀಲ್‌ ರಸ್ತೆ ಕಂಕನಾಡಿ ರೈಲ್ವೇ ಸ್ಟೇಷನ್‌ಗೆ ಹೋಗುವ ಪ್ರಮುಖ ರಸ್ತೆಯಾಗಿದ್ದು, ಇದು ಕಿರಿದಾಗಿರುವ ಕಾರಣ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಸರಕಾರದ ಜತೆ ಮಾತುಕತೆ ನಡೆಸಿ ನೂತನ ರಸ್ತೆಗೆ ಹಣ ಮಂಜೂರು ಮಾಡಿಸಿದ್ದಾಗಿ ಹೇಳಿದರು.

ಈ ರಸ್ತೆಯನ್ನು ಆಧುನೀಕರಿಸಬೇಕೆಂಬುದು ನನ್ನ ಕನಸಾಗಿದ್ದು, ಇದನ್ನು ಅಗಲಗೊಳಿಸಿದರೆ ವಾಹನ ಸಂಚಾರ ಸುಗಮವಾಗಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಶಾಸಕರನ್ನು ರಿಕ್ಷಾ ಚಾಲಕರು ಸಮ್ಮಾನಿಸಿದರು. ಕಾರ್ಪೊರೇಟರ್‌ ಪ್ರವೀಣ್‌ ಚಂದ್ರ ಆಳ್ವ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನೀಸ್‌ ಡಿ’ ಸಿಲ್ವಾ, ಕಾಂಗ್ರೆಸ್‌ ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next