Advertisement
“ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಆಯ್ದ ಬಸ್ಸುಗಳಲ್ಲಿ ತಪಾಸಣೆ ನಡೆಸಿದಾಗ ಅರ್ಧ ದಿನ ಸಂಚರಿಸುವ ಒಂದು ಬಸ್‌ನಲ್ಲಿ ಕನಿಷ್ಠ 2 ಕೆ.ಜಿ ಧೂಳು ಸಂಗ್ರಹವಾಗಿರುತ್ತದೆ. ನಗರದಲ್ಲಿ ಮೆಟ್ರೋ, ಬಿಡಿಎ, ಬಿಬಿಎಂಪಿ ಹಾಗೂ ಖಾಸಗಿವರು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳು ಇದಕ್ಕೆ ಕಾರಣ ಎಂಬ ಅಂಶವನ್ನು ಅಧಿಕಾರಿಗಳು ಗುರುತಿಸಿದ್ದಾರೆ,’ ಎಂದರು.
Related Articles
Advertisement
ಕಾಮಗಾರಿ ಮುಗಿದ ನಂತರ ಅವಶೇಷಗಳನ್ನು ರಸ್ತೆ ಬದಿ ಬಿಸಾಕುವುದನ್ನು ಬಿಡಬೇಕು ಎಂದು ಮನವಿ ಮಾಡಲಾಗುವುದು. ನಂತರವೂ ಅರ್ಥ ಮಾಡಿಕೊಳ್ಳದಿದ್ದರೆ ಕಾನೂನಿನ ಪರಿಮಿತಿಯೊಳಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು,’ ಎಂದು ಸಚಿವ ರೇವಣ್ಣ ತಿಳಿಸಿದರು.
“ವಿರಳ ಸಂಚಾರ ದಿನ’ ರಿಯಾಯಿತಿ ದರ: “ಸಂಚಾರ ದಟ್ಟಣೆ ಕಡಿಮೆಗೊಳಿಸಿ ಮಾಲಿನ್ಯ ತಡೆಯಲು ಖಾಸಗಿ ವಾಹನಗಳ ಬದಲಿಗೆ ಸಮೂಹ ಸಾರಿಗೆ ಬಳಸುವಂತೆ ಸಾರ್ವಜನಿಕರಿಗೆ ಉತ್ತೇಜನ ನೀಡಲು 2018ರ ಫೆಬ್ರವರಿ ತಿಂಗಳಿಂದ ಪ್ರತಿ 2ನೇ ಭಾನುವಾರ “ವಿರಳ ಸಂಚಾರ ದಿನ’ ನಡೆಸಲು ಉದ್ದೇಶಿಸಲಾಗಿದೆ.
ಈ ದಿನದಂದು ಬಿಎಂಟಿಸಿ ಬಸ್ ಟಿಕೆಟ್ ದರ ಹಾಗೂ ಬಸ್‌ಪಾಸ್ ದರದಲ್ಲಿ ರಿಯಾಯಿತಿ ನೀಡಲು ಇಲಾಖೆ ನಿರ್ಧರಿಸಿದೆ. ಎಷ್ಟು ದರ ಕಡಿಮೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಅದೇ ರೀತಿ ಮೆಟ್ರೋ ರೈಲಿನ ಪ್ರಯಾಣ ದರವನ್ನೂ ಕಡಿಮೆ ಮಾಡಲು ಮನವಿ ಮಾಡಲಾಗಿದೆ ಎಂದು,’ ಸಚಿವ ಎಚ್.ಎಂ.ರೇವಣ್ಣ ಇದೇ ವೇಳೆ ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಮಾರ್ಕೊಪೊಲೊ ಬಸ್ ಖರೀದಿ ಹಗರಣದ “ಫೈಲ್ ರೀಓಪನ್’ ಮಾಡಿಸಿ ತನಿಖೆ ನಡೆಸುತ್ತೇನೆ. ಈ ಸಂಬಂಧ ಸಂಪೂರ್ಣ ವರದಿ ತರಿಸಿಕೊಳ್ಳುತ್ತೇನೆ. ಹಗರಣದಲ್ಲಿ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಭಾಗಿಯಾಗಿದ್ದರೆ, ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ