Advertisement

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

12:13 PM Sep 19, 2024 | Team Udayavani |

ಹಾವೇರಿ: ನಮ್ಮ ಸಮಾಜದ ಶಾಸಕರು ಕೈಕೊಟ್ಟ ನಂತರ, ವಕೀಲರ ಬಳಿ ಬಂದಿದ್ದೇನೆ. ಶಾಸಕಾಂಗದ ಮೇಲೆ ನಂಬಿಕೆ ಕಳೆದುಕೊಂಡು, ಈಗ ನ್ಯಾಯಾಂಗದ ಮೇಲೆ ವಿಶ್ವಾಸ ಇಟ್ಟಿದ್ದೇನೆ. 2A ಮೀಸಲಾತಿ ಹೋರಾಟಕ್ಕೆ ಈಗ ಅಡ್ವೋಕೇಟ್ ಪರಿಷತ್ ಮೂಲಕ ಹೋರಾಟ ಪ್ರಾರಂಭ ಮಾಡಿದ್ದೇವೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಹಾವೇರಿಯಲ್ಲಿ ಮಾತನಾಡಿದ ಅವರು, ಶಾಸಕರು ಮತ್ತು ಜನಪ್ರತಿನಿಧಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಈಗ ಲಿಂಗಾಯತ ಪಂಚಮಸಾಲಿ ಅಡ್ವೋಕೇಟ್ ಪರಿಷತ್ತಿನ ಪ್ರಥಮ ಮಹಾಪರಿಷತ್ ನಡೆಸುತ್ತೇವೆ. ಸೆಪ್ಟೆಂಬರ್ 22 ಬೆಳಗಾವಿಯಲ್ಲಿ ರಾಜ್ಯಮಟ್ಟದ ಸಮಾವೇಶ ಮಾಡುತ್ತೇವೆ. ಬೊಮ್ಮಾಯಿ ಸರ್ಕಾರ ಇದ್ದಾಗ ನಮ್ಮ ಶಾಸಕರು ಮುಂದೆ ನಿಂತು ಕೇಳುತ್ತಿದ್ದರು. ಈಗ ಅವರ ಮನೆ ಬಾಗಿಲು ನಾನು ಹೋಗುವ ಪರಸ್ಥಿತಿ ಬಂದಿದೆ ಎಂದರು.

ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ. ನಮ್ಮ ಶಾಸಕರು ಈಗ ಧ್ವನಿ ಕಳೆದುಕೊಂಡಿದ್ದಾರೆ ಸರ್ಕಾರ ಕಾನೂನು ಸಭೆ ಕರೆದು‌ ಮೀಸಲಾತಿ ಬಗ್ಗೆ ಚರ್ಚೆ ಮಾಡುವವರಿಗೂ ಹೋರಾಟ ಮುಂದುವರೆಸುತ್ತೇವೆ. 60 ಜನ ಶಾಸಕರು ಇದ್ದರು ವಿಧಾನಸೌಧ ಒಳಗೆ ಮಾತನಾಡುತ್ತಿಲ್ಲ. ಸ್ಪೀಕರ್ ಮಾತನಾಡಲು ಅವಕಾಶ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಬರಲು ಅಲ್ಪಸಂಖ್ಯಾತರಷ್ಟೇ ಕಾರಣ ನಮ್ಮ ಸಮಾಜದ ಪಾತ್ರ ಇದೆ. 2A ಮೀಸಲಾತಿ ಕೊಡಲು ತಡವಾದರೂ ಪರವಾಗಿಲ್ಲ. ಒಬಿಸಿ ಗೆ ಸೇರಿಸಿ ಪುಣ್ಯ ಕೊಟ್ಟಿಕೊಳ್ಳಿ. ನಮ್ಮ ಸಮಾಜದ ಋಣ ತೀರಿಸುವ ಕೆಲಸ ಮಾಡಿ ಎಂದು ಸ್ವಾಮೀಜಿ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next