ಮುಂಬಯಿ: ನೆರೂಲ್ ಸೆಕ್ಟರ್ 11ರಲ್ಲಿನ ಶ್ರೀ ಶನೀಶ್ವರ ದೇವಸ್ಥಾನದ 29ನೇ ವಾರ್ಷಿಕೋತ್ಸವ ಮತ್ತು ರಥೋತ್ಸವವು
ಫೆ. 18ರಂದು ಪ್ರಾರಂಭಗೊಂಡಿದ್ದು, 21ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
ಗಳೊಂದಿಗೆ ಜರಗಲಿದೆ.
ಕಳತ್ತೂರು ಉದಯ ತಂತ್ರಿವರ್ಯರ ಪೌರೋಹಿತ್ಯದಲ್ಲಿ ಮಂದಿರದ ಪ್ರಧಾನ ಅರ್ಚಕ ಸೂರಜ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಫೆ. 19ರಂದು ಬೆಳಗ್ಗೆ 9ರಿಂದ ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿಗೆ ನವಕ ಪ್ರದಾನ ಹೋಮ, ಅಪರಾಹ್ನ 4ರಿಂದ ಮಹಿಳಾ ವಿಭಾಗದ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ, ರಾತ್ರಿ 8ರಿಂದ ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿಗೆ ರಂಗಪೂಜೆ, ಬಳಿ ಉತ್ಸವ ಜರಗಲಿದೆ.
ಫೆ. 20ರಂದು ಬೆಳಗ್ಗೆ 9ರಿಂದ ಮುಖ್ಯಪ್ರಾಣ ಸ್ವಾಮಿಗೆ ವಾಯುಸ್ತುತಿ, ಪುರಶ್ಚರಣ ಹವನ, ಸಗ್ರಹಮುಖ ಶನಿಶಾಂತಿ ಹವನ, ಅಪರಾಹ್ನ 4ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ರಾತ್ರಿ 8ರಿಂದ ಬಲಿ ಉತ್ಸವ, ಕವಾಟ ಬಂಧನ ನಡೆಯಲಿದೆ. ಫೆ. 21ರಂದು ಮುಂಜಾನೆ 6ರಿಂದ ಕವಾಟೋದ್ಘಾಟನೆ, ನವಕ ಪ್ರದಾನ ಹವನ, ಪೂರ್ವಾಹ್ನ 11ರಿಂದ ಮಹಾಪೂಜೆ, ಬಲಿ, ರಥಾರೋಹಣ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಬಲಿ ಉತ್ಸವ, ಅವಭೃತ ಸ್ನಾನ, ರಾತ್ರಿ 8ರಿಂದ ಮಹಾಆರತಿ, ಅನ್ನಸಂತರ್ಪಣೆ ನೆರವೇರಲಿದೆ.
ಫೆ. 22ರಂದು ಬೆಳಗ್ಗೆ 9ರಿಂದ ನವಕ ಪ್ರದಾನ ಹೋಮ, ಸಂಪ್ರೋಕ್ಷಣೆ, ತೀರ್ಥ ಪ್ರಸಾದ ವಿತರಣೆ, ಸಂಜೆ 4.30ರಿಂದ ಶ್ರೀ ಶನೀಶ್ವರ ಮಂದಿರದ 29 ನೇ ಹಾಗೂ ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಇದರ 30ನೇ ವಾರ್ಷಿಕೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಂಗಭೂಮಿ ಫೈನ್‌ಆರ್ಟ್ಸ್ ಇದರ ಕಲಾವಿದರಿಂದ ನೃತ್ಯ ವೈವಿಧ್ಯ, ತಾರಾ ಬಂಗೇರ ರಚಿಸಿ, ನಿರ್ದೇಶಿಸಿದ “ಉಂದುವೇ ಜೀವನ’ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ, ಪನ್ವೇಲ್ ಮಹಾನಗರ ಪಾಲಿಕೆಯ ಸ್ಥಾಯೀ ಸಮಿತಿಯ ಅಧ್ಯಕ್ಷ ಸಂತೋಷ್ ಜಿ. ಶೆಟ್ಟಿ ಅವರನ್ನು ಮಂದಿರದ ವತಿಯಿಂದ ಸಮ್ಮಾನಿ ಸಲಾಗುವುದು. ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವು ಜರಗಲಿದ್ದು, ಭಕ್ತರು ಸಹಕರಿಸುವಂತೆ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಜತೆ ಕಾರ್ಯದರ್ಶಿ ಜಯಕರ ಬಿ. ಪೂಜಾರಿ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಆದ್ಯಪಾಡಿಗುತ್ತು ಕರುಣಾಕರ ಎಸ್. ಆಳ್ವ, ವಿಶ್ವಸ್ಥರಾದ ಎನ್. ಡಿ. ಶೆಣೈ, ಪುನೀತ್ ಕುಮಾರ್ ಆರ್. ಶೆಟ್ಟಿ, ಪ್ರಭಾಕರ ಎಸ್. ಹೆಗ್ಡೆ, ಅನಿಲ್ ಕುಮಾರ್ ಹೆಗ್ಡೆ, ಕೃಷ್ಣ ಎಂ. ಪೂಜಾರಿ, ದಾಮೋದರ ಶೆಟ್ಟಿ, ದಯಾನಂದ ಶೆಟ್ಟಿ, ತಾರಾನಾಥ ಶೆಟ್ಟಿ, ಪ್ರಧಾನ ಅರ್ಚಕ ಸೂರಜ್ ಭಟ್, ಭಜನ ಮಂಡಳಿಯ ಅಧ್ಯಕ್ಷ ಜಯರಾಮ ಬಿ. ಪೂಜಾರಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸ್ವರ್ಣಲತಾ ಡಿ. ಶೆಟ್ಟಿ, ಉಪಾಧ್ಯಕ್ಷೆ ಸರೋಜಿನಿ ಜೆ. ಪೂಜಾರಿ, ಸಲಹಾ
ಸಮಿತಿಯ ಪ್ರಕಾಶ್ ಭಂಡಾರಿ, ಕೆ. ಡಿ. ಶೆಟ್ಟಿ, ಸದಾನಂದ ಡಿ. ಶೆಟ್ಟಿ, ಎನ್. ಕೆ. ಪೂಜಾರಿ, ಜಯರಾಮ ಪೂಜಾರಿ, ಕೃಷ್ಣ ಐ. ಕೋಟ್ಯಾನ್, ಪೂಜಾ ಸಮಿತಿ, ಮಹಿಳಾ ವಿಭಾಗ, ಸರ್ವಸದಸ್ಯರು, ಅರ್ಚಕ ವೃಂದದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.