ನವದೆಹಲಿ: ನೋಟು ಅಮಾನ್ಯದಿಂದ ಎಷ್ಟು ಪ್ರಮಾಣದಲ್ಲಿ ಕಪ್ಪುಹಣ ಪತ್ತೆಯಾಗಿದೆ ಎಂದು ಸಂಸತ್ ಸ್ಥಾಯಿ ಸಮಿತಿ ಆರ್‌ಬಿಐಗೆ ಪ್ರಶ್ನಿಸಿದಾಗ ಮಾಹಿತಿ ಇಲ್ಲ ಎಂದು ಸೋಮ ವಾರ ಹೇಳಿತ್ತು. ಇದೀಗ ಸರ್ಕಾರವೇ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಸುಮಾರು 2.09 ಲಕ್ಷ ಕಂಪನಿಗಳ ಮಾನ್ಯತೆ ರದ್ದು ಮಾಡಲಾಗಿದೆ. ಜತೆಗೆ ಅವುಗಳಲ್ಲಿನ ನಿರ್ದೇಶಕರು ಯಾವುದೇ ಆಡಳಿತಾತ್ಮಕ ಕೆಲಸ ನಡೆಸದಂತೆ ತಡೆ ವಿಧಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರಿನ 11,178 ಕಂಪನಿಗಳೂ ಇವೆ ಎಂದು ಕಂಪನಿ ಗಳ ನೋಂದಣಿ ಸಂಸ್ಥೆ (ರಿಜಿಸ್ಟ್ರಾರ್ ಆಫ್ ಕಂಪನೀಸ್) ತಿಳಿಸಿದೆ. ಮುಂದಿನ ದಿನಗಳಲ್ಲಿ ಇಂಥವುಗಳನ್ನು ಪತ್ತೆ ಹಚ್ಚಿ, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಂದು ಕೇಂದ್ರ ಕಾರ್ಪೋರೆಟ್ ವ್ಯವಹಾರಗಳ ಖಾತೆ ಸಚಿವಾಲಯ ಎಚ್ಚರಿಕೆ ನೀಡಿದೆ.
ಕೇಂದ್ರದ ಸೂಚನೆ ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದೇ ಇರುವುದು, ವ್ಯಾಪಾರದ ವಿವರಗಳನ್ನು ನೀಡಿ, ಅಪ್‌ಡೇಟ್ ಮಾಡದೆ ಬ್ಯಾಂಕ್ ಖಾತೆಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದೂ ಗಮನಕ್ಕೆ ಬಂದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೂಡ ಈ ನಿಟ್ಟಿಲ್ಲಿ ಕಠಿಣವಾಗಿ ವರ್ತಿಸುವಂತೆ ಹಾಗೂ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ಅಂಥ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ತನಿಖಾ ಸಂಸ್ಥೆಗಳು ನಕಲಿ ಕಂಪನಿಗಳ ವಿರುದ್ಧ ದೇಶಾದ್ಯಂತ ಸಿಬಿಐ, ಜಾರಿ ನಿರ್ದೇಶನಾಲಯ ಸೇರಿ ಹಲವು ಸಂಸ್ಥೆಗಳು ದಾಳಿ ನಡೆಸಿದ್ದವು. ಈ ಬೆಳವಣಿಗೆಯಿಂದಾಗಿ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ಸುಮಾರು 2.09 ಲಕ್ಷ ಕಂಪನಿಗಳು ಉಳಿದುಕೊಂಡಿವೆ.
ಈ ಬಗ್ಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಹಾಯಕ ಸಚಿವ ಪಿ.ಪಿ.ಚೌಧರಿ ಮಂಗಳವಾರ ಟ್ವೀಟ್ ಮಾಡಿ, ಇದು ಕಪ್ಪುಹಣದ ವಿರುದ್ಧದ ಹೋರಾಟ. ಅಂಥ ಕಂಪನಿಗಳ, ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಆಧಾರ್ ಕೇಂದ್ರ ಗಡುವು ವಿಸ್ತರಣೆ: ತಪ್ಪಿದರೆ ಬ್ಯಾಂಕ್‌ಗಳಿಗೆ 20 ಸಾವಿರ ರೂ. ದಂಡ ಎಲ್ಲ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಶಾಖೆಗಳಲ್ಲಿ ಆಧಾರ್ ನೋಂದಣಿ ಕೇಂದ್ರ ಸ್ಥಾಪಿಸಲು ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ವಿಧಿಸಿದ್ದ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸಿದೆ. ಇದೇ ತಿಂಗಳ ಕೊನೆಯೊಳಗೆ 10 ಶಾಖೆಗಳ ಪೈಕಿ ಒಂದರಂತೆ (100 ಶಾಖೆಗಳಿದ್ದರೆ 10 ಶಾಖೆಗಳಲ್ಲಿ)ಎಲ್ಲ ಬ್ಯಾಂಕುಗಳೂ ಆಧಾರ್ ನೋಂದಣಿ ಕೇಂದ್ರ ಕಡ್ಡಾಯವಾಗಿ ಸ್ಥಾಪಿಸಬೇಕು. ತಪ್ಪಿದರೆ ಪ್ರತಿ ತಿಂಗಳಿಗೆ 20 ಸಾವಿರ ರೂ.ಗಳಂತೆ ದಂಡ ವಿಧಿಸಲಾಗುತ್ತದೆ ಎಂದು ಪ್ರಾಧಿಕಾರದ ಸಿಇಒ ಅಜಯ್ ಭೂಷಣ್ ಪಾಂಡೆ ಎಚ್ಚರಿಸಿªದಾರೆ. ಕೆಲವು ಬ್ಯಾಂಕುಗಳು ಕೇಂದ್ರ ತೆರೆಯಲು ಸಮಯ ಬೇಕು ಎಂದು ಮನವಿ ಮಾಡಿದ ಹಿನ್ನೆ°ಲೆಯಲ್ಲಿ ಅವಧಿಯನ್ನು ತಿಂಗಳ ಕೊನೆಯವರೆಗೂ ವಿಸ್ತರಣೆ ಮಾಡಲಾಗಿದೆ.
ಜನರಿಗೆ ಆಧಾರ್ ನೋಂದಣಿಗೆ ಅನು ಕೂಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕುಗಳ ಶಾಖೆ ಗಳಲ್ಲೇ ನೋಂದಣಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಇದನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಸಬೂಬು ಹೇಳದೆ, ನಿಗದಿಪಡಿಸಿದ ಗಡುವಿನ ಆವಧಿಯಲ್ಲಿ ಮಾಡಬೇಕು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.