Advertisement

ನಾಲೆಗೆ ಬಿದ್ದ ಬಸ್‌: 29 ಮಂದಿ ಸಾವು

01:33 AM Jul 09, 2019 | Sriram |

ಆಗ್ರಾ:ಲಕ್ನೋದಿಂದ ದಿಲ್ಲಿಗೆ ಹೊರಟಿದ್ದ ಸರಕಾರಿ ಬಸ್‌ವೊಂದು ಉತ್ತರಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬೃಹತ್‌ ನಾಲೆಯೊಂದಕ್ಕೆ ಸ್ಕಿಡ್‌ ಆಗಿ ಬಿದ್ದ ಕಾರಣ, 29 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.

Advertisement

ರಾಷ್ಟ್ರ ರಾಜಧಾನಿಯಿಂದ 200 ಕಿ.ಮೀ. ದೂರದ ಎಟ್ಮಾದ್ಪುರ್‌ ಪ್ರದೇಶದಲ್ಲಿ ಸೋಮವಾರ ಮುಂಜಾನೆ 4.30ರ ವೇಳೆಗೆ ಈ ದುರ್ಘ‌ಟನೆ ಸಂಭವಿಸಿದೆ. ಅವಘಡ ನಡೆಯುವ ಸಮಯದಲ್ಲಿ ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. 20 ಅಡಿ ಎತ್ತರದ ಸೇತುವೆಯ ಮೇಲಿಂದ ಬಸ್ಸಿನ ಅವಶೇಷವನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾ ಯಿತು. ಇದಕ್ಕಾಗಿ 2 ಎಸ್ಕವೇಟರ್‌ಗಳು ಹಾಗೂ ಒಂದು ಕ್ರೇನ್‌ ಅನ್ನು ಬಳಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸಹಿತ ಅನೇಕರು ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಉ. ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಘಟನೆಯ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದ್ದಾರೆ. ಮೃತರ ಕುಟುಂಬ ಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನೂ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next