Advertisement

ಶಿರ್ವ : ಸಂತ ಮೇರಿ ಕಾಲೇಜು 28ನೇ ರಕ್ತದಾನ ಶಿಬಿರ

05:41 PM Nov 16, 2021 | Team Udayavani |

ಶಿರ್ವ: ರಕ್ತಕ್ಕೆ ರಕ್ತವೇ ಸಾಟಿಯಾಗಿದ್ದು,ರಕ್ತವನ್ನು ತಯಾರಿಸಿದವರಿಲ್ಲ.ಒಂದು ಯೂನಿಟ್‌ ರಕ್ತದಿಂದ 3 ವಿವಿಧ ರೋಗಿಗಳ ಜೀವ ಉಳಿಸಬಹುದಾಗಿದ್ದು ,ರಕ್ತದಾನ ಮಾಡಿ ರಕ್ತಸಂಬಂಧಿಗಳಾಗಿ ಹಲವಾರು ಜನರ ಪ್ರಾಣ ಉಳಿಸುವ ಕೆಲಸದಲ್ಲಿ ಭಾಗಿಯಾಗಿ ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ವಿಶ್ವನಾಥ‌ ಶೆಟ್ಟಿ ಹೇಳಿದರು.

Advertisement

ಅವರು ನ. 16ರಂದು ಶಿರ್ವ ಸಂತ ಮೇರಿ ಕಾಲೇಜಿನ ಸಭಾಂಗಣದಲ್ಲಿ ಲಯನ್ಸ್‌ ಕ್ಲಬ್‌ ಶಿರ್ವ-ಮಂಚಕಲ್‌, ಕಥೋಲಿಕ್‌ ಸಭಾ ಉಡುಪಿ ಪ್ರದೇಶ್‌ಶಿರ್ವ ಘಟಕ, ಸಂತ ಮೇರಿ ಕಾಲೇಜು ಶಿರ್ವ,ಲಿಯೋ ಡಿಸ್ಟ್ರಿಕ್ಟ್ 317ಸಿ, ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ 28ನೇ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್‌ ಡೇಸಾ ಮಾತನಾಡಿ ರಕ್ತದಾನ ಸಂಬಂಧಗಳನ್ನು ಒಗ್ಗೂಡಿಸುತ್ತಿದ್ದು,ಕೊರೊನಾ ಸಂದರ್ಭದಲ್ಲಿ  ರಕ್ತದ ಕೊರತೆಯುಂಟಾಗಿದ್ದು, ರೋಗಿಗಳ ಪ್ರಾಣ ಉಳಿಸಲು ರಕ್ತದಾನ ಮಾಡಿದ ದಾನಿಗಳಿಗೆ ದೇವರ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಬ್ಯಾಂಕ್‌ನ ಡಾ| ವಿನೂ ರಾಜೇಂದ್ರನ್‌ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸುಮಾರು 90ಯೂನಿಟ್‌ ರಕ್ತ ಸಂಗ್ರಹಿಸಲಾಯಿತು.

Advertisement

ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಜಾರ್ಜ್‌ ಅನಿಲ್‌ ಡಿ‡ಸೋಜಾ, ಕಥೋಲಿಕ್‌ ಸಭಾ ಶಿರ್ವ ಘಟಕದ ಅಧ್ಯಕ್ಷ ಜೆರಾಲ್ಡ್‌ ರೊಡ್ರಿಗಸ್‌, ಲಿಯೋ ಡಿಸ್ಟ್ರಿಕ್ಟ್ 317ಸಿ ಅಧ್ಯಕ್ಷ ಲಿಯೋ ಜಾಯ್‌ ಫೆರ್ನಾಂಡಿಸ್‌, ಕಥೋಲಿಕ್‌ ಸಭಾ ಉಡುಪಿ ವಲಯದ ಅಧ್ಯಕ್ಷೆ ಲೀನಾ ಮತಾಯಸ್‌,ಜಿಲ್ಲಾ ಕ್ಯಾಬಿನೆಟ್‌ ಖಜಾಂಚಿ ಜಯಪ್ರಕಾಶ್‌ ಭಂಡಾರಿ,ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್‌ ಕೆ. ಪ್ರವೀಣ್‌ ಕುಮಾರ್‌,ಎನ್ನೆಸ್ಸೆಸ್‌ ಅಧಿಕಾರಿಗಳಾದ ಪ್ರೇಮನಾಥ್‌,ರಕ್ಷಾ ನಾಯಕ್‌, ರೋವರ್ ರೇಂಜರ್ ನಾಯಕರಾದ ಸಂಗೀತಾ ಪೂಜಾರಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ಲಯನ್ಸ್‌ ಪದಾಧಿಕಾರಿಗಳು ಮತ್ತು ಸದಸ್ಯರು,ಕಥೋಲಿಕ್‌ ಸಭಾದ ಸದಸ್ಯರು,ರಕ್ತನಿಧಿ ವಿಭಾಗದ ಸದಸ್ಯರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿರ್ವಸಂತ ಮೇರಿ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್‌ ಐವನ್‌ ಮೋನಿಸ್‌ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿ, ಯೂತ್‌ ರೆಡ್‌ಕ್ರಾಸ್‌ ಸಂಯೋಜಕ ವಿಠಲ ನಾಯಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next