Advertisement

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

10:12 PM Jun 15, 2021 | Team Udayavani

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಭರದಿಂದ ಸಾಗಿದ್ದು, ಅದರಡಿ, 28 ಸಮುದ್ರ ವಿಮಾನ ಮಾರ್ಗಗಳು ಹಾಗೂ 14 ನೀರ ಮೇಲಿನ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿವೆ. ಗುಜರಾತ್‌, ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶ, ಅಂಡಮಾನ್‌-ನಿಕೋಬಾರ್‌ ದ್ವೀಪಗಳು ಹಾಗೂ ಲಕ್ಷದ್ವೀಪದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

Advertisement

ಈ ಯೋಜನೆಯ ಜಾರಿಗೆ ಪೂರಕವಾಗಿ ಮಂಗಳವಾರದಂದು ಕೇಂದ್ರ ನಾಗರಿಕ ವಿಮಾನ ಸಚಿವಾಲಯ, ಬಂದರು ಮತ್ತು ಜಲಮಾರ್ಗಗಳ ಸಚಿವಾಲಯದ ನಡುವೆ ಮಹತ್ವದ ಒಪ್ಪಂದವೇರ್ಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ಹಳ್ಳಿಯ ಜನರಿಂದ ವಜ್ರಕ್ಕಾಗಿ ಶೋಧ

ಕಳೆದ ವರ್ಷ ಅ. 31ರಂದು ನರೇಂದ್ರ ಮೋದಿ, ಸ್ಪೈಸ್‌ ಜೆಟ್‌ ಸಂಸ್ಥೆಯ ಸಮುದ್ರ ವಿಮಾನ ಸೇತುವೆ ಸೇವೆಗಳನ್ನು ಉದ್ಘಾಟಿಸಿದ್ದರು. ಆಗ, ಸಂಸ್ಥೆಯ ಸಮುದ್ರ ವಿಮಾನದಲ್ಲಿ ನರ್ಮದಾ ಜಿಲ್ಲೆಯ ಕೆವಾಡಿಯಾದಿಂದ ಅಹ್ಮದಾಬಾದ್‌ನ ಸಬರಮತಿ ನದಿಯವರೆಗೆ ಮೋದಿ ಪಯಣಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next