Advertisement

ಮೈಸೂರು ದಸರಾಗೆ 28.74 ಕೋಟಿ ರೂ.ವೆಚ್ಚ: ಸಚಿವ ಎಸ್‌.ಟಿ. ಸೋಮಶೇಖರ್‌

09:18 PM Nov 01, 2022 | Team Udayavani |

ಮೈಸೂರು: 2022ರ ನಾಡಹಬ್ಬ ಮೈಸೂರು ದಸರಾ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು, ಅದಕ್ಕಾಗಿ 28.74 ಕೋಟಿ ರೂ.ವೆಚ್ಚವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ಅರಮನೆ ಮಂಡಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿ ಮೆರವಣಿಗೆ ಆದ ವೆಚ್ಚದ ಬಗ್ಗೆ ಮಾಹಿತಿ ನೀಡಿದರು. ದಸರಾ ಉತ್ಸವಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ., ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ ರೂ., ಪ್ರಾಯೋಜಕತ್ವದಿಂದ 32 ಲಕ್ಷದ 50 ಸಾವಿರ, ಟಿಕೆಟ್‌ ಮತ್ತು ಗೋಲ್ಡ್ ಕಾರ್ಡ್‌ ಮಾರಾಟದಿಂದ 76.38 ಲಕ್ಷ ರೂ. ಸೇರಿ ಒಟ್ಟು 31 ಕೋಟಿ, 8 ಲಕ್ಷದ 88 ಸಾವಿರದ 819 ರೂ. ಸಂಗ್ರಹವಾಗಿತ್ತು.

ಇದರಲ್ಲಿ ದಸರಾ ಉಪಸಮಿತಿಗಳಿಗೆ 26,54,49,058 ರೂ. ಹಾಗೂ ಮಂಡ್ಯ ಚಾಮರಾಜನಗರ ಹಾಸನ ಜಿಲ್ಲೆಯ ದಸರಾ ಉತ್ಸವಕ್ಕೆ 2.20 ಕೋಟಿ ರೂ. ವೆಚ್ಚವಾಗಿದೆ. ಜತೆಗೆ ರಾಜವಂಶಸ್ಥರಿಗೆ 47.20 ಲಕ್ಷ ರೂ. ಗೌರವ ಧನ ನೀಡಲಾಗಿದೆ. 1.26 ಕೋಟಿ ರೂ. ಉಳಿಕೆಯಾಗಿದೆ. 21 ದಸರಾ ಉಪಸಮಿತಿಗಳು ಸೇರಿದಂತೆ ವೆಚ್ಚದ ಲೆಕ್ಕಾಚಾರವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ದಿನಗಳಲ್ಲಿ ಪರಿಶೀಲನೆ ನಡೆಯಲಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next