Advertisement

Nepal’s Mountain Annapurna; ಭಾರತದ ಪರ್ವತಾರೋಹಿ ಪತ್ತೆ

07:39 PM Apr 18, 2023 | Team Udayavani |

ಕಠ್ಮಂಡು: ಜಗತ್ತಿನ 8ನೇ ಅತೀ ಎತ್ತರದ ಪರ್ವತವಾಗಿರುವ ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ಪರ್ವತಾರೋಹಿ ಬಲಜೀತ್‌ ಕೌರ್‌, ಮಂಗಳವಾರ ಜೀವಂತವಾಗಿ ಪತ್ತೆಯಾಗಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಅತ್ಯಂತ ಕ್ಲಿಷ್ಠಕರ ಪರ್ವತಾರೋಹಣಗಳ ಪೈಕಿ ಒಂದಾಗಿರುವ ಅನ್ನಪೂರ್ಣ ಪರ್ವತ ಶಿಖರದ ಶೃಂಗ ತಲುಪಿದ ಬಳಿಕ 4ನೇ ಶಿಬಿರಕ್ಕೆ ವಾಪಸ್‌ ಆಗುವ ವೇಳೆ ಕೌರ್‌ ನಾಪತ್ತೆಯಾಗಿದ್ದರು.

ರೆಡಿಯೋ ಸಿಗ್ನಲ್‌ ಕೂಡ ಕಡಿತಗೊಂಡಿದ್ದರಿಂದ ಅವರ ಹುಡುಕಾಟ ಕಷ್ಟ ಸಾಧ್ಯವಾಗಿತ್ತು. ಸಿಗ್ನಲ್‌ ಪತ್ತೆಯಾದ ಬಳಿಕ ಕೌರ್‌, ಸಹಾಯ ಕೋರಿದರು, ತಕ್ಷಣ ಅವರನ್ನು ಏರ್‌ಲಿಫ್ಟ್ ಮಾಡಲು ವಿಮಾನಗಳು ಧಾವಿಸಿದವು.

ಆಮ್ಲಜನಕದ ಸಿಲಿಂಡರ್‌ ಖಾಲಿಯಾದ ಹಿನ್ನೆಲೆ ನಿತ್ರಾಣವಾಗಿ ಕ್ಯಾಂಪ್‌ನತ್ತ ಸಂಚರಿಸುತ್ತಿದ್ದ ಅವರನ್ನು ಪತ್ತೆಹಚ್ಚಿ, ರಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next