ಕಠ್ಮಂಡು: ನೇಪಾಳದ ಖ್ಯಾತ ಪರ್ವತಾರೋಹಿ ಪಸಂಗ್ ದಾವಾ ಲಾಮಾ ಸೋಮವಾರ ಸತತ 27ನೇ ಬಾರಿಗೆ ಮೌಂಟ್ ಎವರೆಸ್ಟ್ ಏರುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಬಾರಿ ಎವರೆಸ್ಟ್ ಶಿಖರವೇರಿದ 2ನೇ ಪರ್ವತಾರೋಹಿ ಎಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಈ ಕುರಿತು ಇಮ್ಯಾಜಿನ್ ನೇಪಾಳ ಟ್ರೆಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ದವಾ ಗ್ಯಾಲೆನ್ ಶೆರ್ಪಾ ಮಾಹಿತಿ ನೀಡಿದ್ದು, 46 ವರ್ಷದ ಪಸಂಗ್ ಸೋಮವಾರ ಬೆಳಗ್ಗೆ 8.25ರ ವೇಳೆಗೆ 27ನೇ ಬಾರಿಗೆ 8,848.86 ಅಡಿ ಎತ್ತರದ ಶಿಖರವನ್ನೇರಿದ್ದಾರೆ. ಇದಕ್ಕೂ ಮುನ್ನ, ಮೇ 17ರಂದು ಕಮಿರಿತಾ ಶೆರ್ಪಾ ಎನ್ನುವ ಪರ್ವತಾರೋಹಿ 27ನೇ ಬಾರಿಗೆ ಪರ್ವತಾರೋಹಣ ಮಾಡಿದ್ದರು. ಅಲ್ಲದೇ ಈಗ ಅವರು 28ನೇ ಬಾರಿಯ ಪಯಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದಿದ್ದಾರೆ.
Advertisement
27 ಬಾರಿ Everest ಏರಿ ದಾಖಲೆ!
08:49 PM May 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.