Advertisement

ಅಗ್ನಿ ದುರಂತ: 26 ಮಕ್ಕಳ ಸಾವು

12:54 AM Sep 19, 2019 | mahesh |

ಮನ್ರೋವಿಯಾ: ಲೈಬೀರಿಯಾದ ರಾಜಧಾನಿ ಮನ್ರೋವಿಯಾದ ಹೊರವಲಯದ ಕುರಾನ್‌ ಕಲಿಕಾ ಶಾಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಅಗ್ನಿ ಅವಘಡವು 27 ಮಕ್ಕಳನ್ನು ಬಲಿಪಡೆದುಕೊಂಡಿದೆ. ಬೆಂಕಿ ಆಕಸ್ಮಿಕದಲ್ಲಿ ಓರ್ವ ಶಿಕ್ಷಕ ಮತ್ತು ಇಬ್ಬರು ವಿದ್ಯಾರ್ಥಿಗಳು ಮಾತ್ರವೇ ಪಾರಾಗಿದ್ದಾರೆ ಎಂದು ಇಲ್ಲಿನ ಅಧ್ಯಕ್ಷೀಯ ಕಚೇರಿ ಬುಧವಾರ ತಿಳಿಸಿದೆ. ಮಕ್ಕಳು ಮಲಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಲೈಬೀರಿಯಾ ಅಧ್ಯಕ್ಷ ಜಾರ್ಜ್‌ ವೀಹ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next