ಧಾರವಾಡ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬಗಟ್ಟಿ ಕ್ರಾಸ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡಿದ ಪೊಲೀಸರು ದಾಖಲೆ ಇಲ್ಲದ 2.55ಕೋ.ರೂ.ಮೌಲ್ಯದ 7 ಕೆ.ಜಿ. 722 ಗ್ರಾಂ. ತೂಕದ ಚಿನ್ನಾಭರಣವನ್ನು ಗೋವಾ ಮತ್ತು ರಾಜಸ್ಥಾನ ಮೂಲದ ಜ್ಯುವೆಲರಿ ಶಾಪ್ ಮ್ಯಾನೇಜರ್‌ಗಳಾದ ಪ್ರತೀಕ ನಾವೇಕರ್(27) ಮತ್ತು ವಿಕ್ರಂಸಿಂಗ್ ರಾಥೋಡ್ (32) ಅವರಿಂದ ವಶಪಡಿಸಿಕೊಂಡು ಬಂಧಿಸಲಾಗಿದೆ. ಈ ಒಡವೆಗಳನ್ನು ತಮ್ಮ ಕಾರಿನಲ್ಲಿ ಹುಬ್ಬಳ್ಳಿ ಕಡೆಗೆ ಸಾಗಿಸುತ್ತಿದ್ದಾಗ ಪೊಲೀಸರು ಆ ಒಡವೆಗಳನ್ನು ವಶಪಡಿಸಿಕೊಂಡರು.
4 ಲಕ್ಷ ರೂ. ವಶ
ವಿಜಯಪುರ: ನಗರದಲ್ಲಿ ಕಾರಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 4ಲಕ್ಷ ರೂ. ಹಣವನ್ನು ಚುನಾವಣಾ ಅ ಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಅಥಣಿ ನಾಕಾ ಮೂಲಕ ಸಾಗುತ್ತಿದ್ದ ಕಾರು ತಡೆದ ಚುನಾವಣಾ ಫ್ಲೆ$çಯಿಂಗ್ ಸ್ಕ್ವಾಡ್ ಸಮಿತಿ ಮುಖ್ಯಸ್ಥ ಡಾ| ಆನಂದ ದೇವರನಾವದಗಿ ಅವರ ನೇತೃತ್ವದ ಅ ಧಿಕಾರಿಗಳ ತಂಡ ಕಾರು ತಡೆದು ಪರಿಶೀಲಿಸಿದಾಗ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ.