ದಾವಣಗೆರೆ: ರಾಜ್ಯಕ್ಕೆ ಲಸಿಕೆ ಹೆಚ್ಚಿಸುವ ವಿಚಾರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ವಿಚಾರವಾಗಿ ಚರ್ಚಿಸಲು ನಾನು ದೆಹಲಿಗೆ ಹೋಗಿದ್ದೆ. ಈ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟನೆ ನೀಡಿದರು.
ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಂದಿನ ಐದು ವರ್ಷದಲ್ಲಿ ಮೇಲ್ದರ್ಜೆಗೆ ಉದ್ದೇಶ ಹೊಂದಲಾಗಿದೆ ಎಂದರು.
ಲಸಿಕೆ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕರ್ನಾಟಕಕ್ಕೆ ಎರಡುವರೆ ಕೋಟಿ ಲಸಿಕೆ ನೀಡಿದ್ದು ಸುಳ್ಳು ಲೆಕ್ಕಾನಾ? ದೇಶದಲ್ಲಿ 38 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಸಿದ್ದರಾಮಯ್ಯ ಅವರು ಅಮೇರಿಕದಂಥ ದೇಶದಲ್ಲಿ ಎಷ್ಟು ಲಸಿಕೆ ಕೊಟ್ಟಿದ್ದಾರೆಂದು ತಿಳಿದುಕೊಳ್ಳಲಿ. ಸಿದ್ದರಾಮಯ್ಯ ಅವರಿಗೆ ಸುಳ್ಳು ಲೆಕ್ಕ ಹೇಳೋ ಅಭ್ಯಾಸ ಇರಬೇಕು.ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ : ಲಂಚ ಪಡೆಯುತ್ತಿದ್ದ ಪಿಎಸ್‌ಐ, ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ
ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಸಚಿವ ಸಿ. ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಸುಧಾಕರ್, ಯಾರು ಪರೀಕ್ಷೆ ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ನಾವು ೧೭ ಶಾಸಕರು ಮಾತ್ರ ಪರೀಕ್ಷೆ ಬರೆದು ಪಾಸಾಗಿದ್ದೇವೆ ಎಂದರು. ರಮೇಶ್ ಹಾಗೂ ಮುನಿರತ್ನ ಸಚಿವ ಸ್ಥಾನ ಕೊಡುವ ಬಗ್ಗೆ ಮುಖ್ಯಮಂತ್ರಿಯವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು